Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಪ್ರಾಸ್ಟೇಟ್ ಕ್ಯಾನ್ಸರ್ ಕುರಿತು...

ಪ್ರಾಸ್ಟೇಟ್ ಕ್ಯಾನ್ಸರ್ ಕುರಿತು ಮಿಥ್ಯೆಗಳ ಹಿಂದಿನ ಸತ್ಯಗಳು

ವಾರ್ತಾಭಾರತಿವಾರ್ತಾಭಾರತಿ12 Jun 2020 11:44 PM IST
share
ಪ್ರಾಸ್ಟೇಟ್ ಕ್ಯಾನ್ಸರ್ ಕುರಿತು ಮಿಥ್ಯೆಗಳ ಹಿಂದಿನ ಸತ್ಯಗಳು

 ಕ್ಯಾನ್ಸರ್‌ಗಳ ಬಗ್ಗೆ ಮಾತನಾಡುವವರು ಪ್ರಾಸ್ಟೇಟ್ ಕ್ಯಾನ್ಸರ್ ಕುರಿತು ಮಾತನಾಡುವುದು ಕಡಿಮೆಯೇ ಎನ್ನಬಹುದು. ಪ್ರಾಸ್ಟೇಟ್ ಕ್ಯಾನ್ಸರ್ ಪ್ರಮುಖ ಭಾರತೀಯ ನಗರಗಳಲ್ಲಿ ಪುರುಷರನ್ನು ಅತಿ ಹೆಚ್ಚಾಗಿ ಕಾಡುವ ಎರಡನೇ ಕ್ಯಾನ್ಸರ್ ಆಗಿದೆ. ಪ್ರಕರಣಗಳು ಹೆಚ್ಚುತ್ತಿದ್ದರೂ ಹೆಚ್ಚಿನ ಪುರುಷರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ತಿಳುವಳಿಕೆಯಿಲ್ಲ. ಹೀಗಾಗಿ ಈ ಕ್ಯಾನ್ಸರ್ ಕುರಿತು ಹಲವಾರು ಮಿಥ್ಯೆಗಳು ಅಥವಾ ತಪ್ಪುಗ್ರಹಿಕೆಗಳಿವೆ. ಇಂತಹ ಕೆಲವು ಸಾಮಾನ್ಯ ಮಿಥ್ಯೆಗಳ ಹಿಂದಿನ ಸತ್ಯಗಳಿಲ್ಲಿವೆ......

* ವಯಸ್ಸಾದ ಪುರುಷರಿಗೆ ಮಾತ್ರ ಪ್ರಾಸ್ಟೇಟ್ ಕ್ಯಾನ್ಸರ್ ಉಂಟಾಗುತ್ತದೆ

  -ಪುರುಷರಿಗೆ ವಯಸ್ಸಾಗುತ್ತ ಹೋಗುತ್ತಿದ್ದಂತೆ ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಗುರಿಯಾಗುವ ಅಪಾಯವು ಹೆಚ್ಚುತ್ತ ಹೋಗುತ್ತದೆ ಎನ್ನುವುದು ನಿಜ. ಹೆಚ್ಚಿನ ಪ್ರಕರಣಗಳಲ್ಲಿ 65 ವರ್ಷ ಮೀರಿದವರು ಈ ಕ್ಯಾನ್ಸರ್‌ನಿಂದ ಬಳಲುತ್ತಿರುತ್ತಾರೆ. ಆದರೆ ಪ್ರಾಸ್ಟೇಟ್ ಕ್ಯಾನ್ಸರ್ ವೃದ್ಧರ ಕಾಯಿಲೆ ಎನ್ನುವುದು ಸಂಪೂರ್ಣ ತಪ್ಪು. ಅಪರೂಪವಾಗಿದ್ದರೂ 40 ವರ್ಷಗಳ ಆಸುಪಾಸಿನ ಪ್ರಾಯದವರೂ ಈ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ. ಅಲ್ಲದೆ ವಯಸ್ಸೊಂದೇ ವ್ಯಕ್ತಿಗಳನ್ನು ಕ್ಯಾನ್ಸರ್ ಅಪಾಯಕ್ಕೆ ಗುರಿಯಾಗಿಸುವ ಅಂಶವಲ್ಲ. ಕುಟುಂಬದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್‌ನ ಇತಿಹಾಸ ಹೊಂದಿರುವವರು ಈ ಕ್ಯಾನ್ಸರ್‌ಗೆ ಗುರಿಯಾಗುವ ಇಮ್ಮಡಿ ಅಪಾಯವನ್ನು ಹೊಂದಿರುತ್ತಾರೆ. ಹೀಗೆ ತಂದೆ ಅಥವಾ ಸೋದರನೋ ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ನರಳಿದ್ದರೆ ವ್ಯಕ್ತಿಗೂ ಅದು ಕಾಡುವ ಸಾಧ್ಯತೆಯಿರುತ್ತದೆ. ಡಯಟ್‌ನಂತಹ ಜೀವನಶೈಲಿ ಅಂಶಗಳು ಸಹ ಪ್ರಾಸ್ಟೇಟ್ ಕ್ಯಾನ್ಸರ್‌ನ ಅಪಾಯವನ್ನುಂಟು ಮಾಡುತ್ತವೆ.

* ವ್ಯಕ್ತಿಯಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್‌ನ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲವಾದರೆ ಆತನಿಗೆ ಈ ಸಮಸ್ಯೆಯಿಲ್ಲ

 -ತಮ್ಮಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್‌ನ ಯಾವುದೇ ಲಕ್ಷಣಗಳಿಲ್ಲ,ಹೀಗಾಗಿ ತಮಗೆ ಈ ಕ್ಯಾನ್ಸರ್‌ನ ಬಾಧೆ ಇಲ್ಲ ಎಂದು ಹೆಚ್ಚಿನ ಪುರುಷರು ಭಾವಿಸಿರುತ್ತಾರೆ. ಇದು ಪ್ರಾಸ್ಟೇಟ್ ಕ್ಯಾನ್ಸರ್‌ನ ಕುರಿತು ಸಾಮಾನ್ಯ ಮಿಥ್ಯೆಗಳಲ್ಲೊಂದಾಗಿದೆ. ಆದರೆ ಇದು ಸಂಪೂರ್ಣವಾಗಿ ತಪ್ಪು, ಏಕೆಂದರೆ ಪ್ರಾಸ್ಟೇಟ್ ಕ್ಯಾನ್ಸರ್ ಲಕ್ಷಣರಹಿತ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಅಂದರೆ ಎಲ್ಲ ಪುರುಷರಲ್ಲಿಯೂ ಈ ರೋಗದ ಲಕ್ಷಣಗಳು ಪ್ರಕಟವಾಗುವುದಿಲ್ಲ ಮತ್ತು ಒಂದು ವೇಳೆ ಪ್ರಾಸ್ಟೇಟ್ ಕ್ಯಾನ್ಸರ್‌ನ ಲಕ್ಷಣಗಳಿದ್ದರೂ ಅದನ್ನು ಇತರ ಕಾಯಿಲೆ ಎಂದು ತಪ್ಪಾಗಿ ಗ್ರಹಿಸಬಹುದು. ವ್ಯಕ್ತಿಯು ಪ್ರಾಸ್ಟೇಟ್ ಕ್ಯಾನ್ಸರ್ ಸ್ಕ್ರೀನಿಂಗ್‌ಗೆ ಒಳಗಾದರೆ ಈ ರೋಗವಿದ್ದರೆ ಆರಂಭಿಕ ಹಂತದಲ್ಲಿಯೇ ಗುರುತಿಸಬಹುದಾಗಿದೆ.

* ಪ್ರಾಸ್ಟೇಟ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಿಂದ ಲೈಂಗಿಕ ಸಾಮರ್ಥ್ಯ ನಷ್ಟಗೊಳ್ಳುತ್ತದೆ

   -ಪ್ರಾಸ್ಟೇಟ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಿಂದ ಲೈಂಗಿಕ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ ಎಂದು ಹೆಚ್ಚಿನವರು ಭಾವಿಸುತ್ತಾರೆ,ಆದರೆ ಇದು ನಿಜವಲ್ಲ. ಆರಂಭದ ಹಂತದಲ್ಲಿಯೇ ರೋಗ ನಿರ್ಣಯಗೊಂಡರೆ ಮತ್ತು ತಜ್ಞವೈದ್ಯರಿಂದ ಚಿಕಿತ್ಸೆ ಪಡೆದುಕೊಂಡರೆ ವ್ಯಕ್ತಿಯು ಸಹಜ ದಾಂಪತ್ಯ ಜೀವನವನ್ನು ನಡೆಸಬಹುದು. ರೋಗಿಯು ಪ್ರಾಸ್ಟೇಟ್ ಗ್ರಂಥಿಯನ್ನು ತೆಗೆಯುವ ಶಸ್ತ್ರಚಿಕಿತ್ಸೆಯ ಒಳಿತು-ಕೆಡುಕುಗಳ ಬಗ್ಗೆ ವೈದ್ಯರಿಂದ ತಿಳಿದುಕೊಳ್ಳಬಹುದು. ಶಸ್ತ್ರಚಿಕಿತ್ಸೆಯಿಂದ ನರಗಳಿಗೆ ಘಾಸಿಯಾಗಬಹುದು ಮತ್ತು ಅದು ಸಂಕ್ಷಿಪ್ತ ಅವಧಿಗೆ,ಅಂದರೆ ಚೇತರಿಕೆಯ ಅವಧಿಯಲ್ಲಿ ಲೈಂಗಿಕ ಜೀವನದ ಮೇಲೆ ಪರಿಣಾಮವನ್ನುಂಟು ಮಾಡಬಹುದು. ಚೇತರಿಕೆಯ ಅವಧಿ ಸಾಮಾನ್ಯವಾಗಿ ಕೆಲವು ತಿಂಗಳುಗಳಿಂದ ಹಿಡಿದು ಒಂದೆರಡು ವರ್ಷಗಳವರೆಗೆ ಇರಬಹುದು ಮತ್ತು ಈ ಅವಧಿಯ ಬಳಿಕ ವ್ಯಕ್ತಿಯು ಸಹಜ ದಾಂಪತ್ಯ ಜೀವನವನ್ನು ನಡೆಸಬಹುದು. ಇದು ಕಾಯಿಲೆಯ ಸ್ಥಿತಿ ಮತ್ತು ಚಿಕಿತ್ಸೆಯ ಪರ್ಯಾಯಗಳನ್ನು ಅವಲಂಬಿಸಿರುತ್ತದೆ ಮತ್ತು ಇವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು.

* ಪಿಎಸ್‌ಎ ಮಟ್ಟ ಹೆಚ್ಚಿದ್ದರೆ ಅದು ಪ್ರಾಸ್ಟೇಟ್ ಕ್ಯಾನ್ಸರ್‌ನ್ನು ಸೂಚಿಸುತ್ತದೆ

 -ಎಲ್ಲ ಪ್ರಕರಣಗಳಲ್ಲಿಯೂ ಇದು ಅಗತ್ಯವೇನಲ್ಲ. ಪ್ರಾಸ್ಟೇಟ್ ಗ್ರಂಥಿಯ ಯಾವುದೇ ಉರಿಯೂತವು ಪ್ರಾಸ್ಟೇಟ್ ಸ್ಪೆಸಿಫಿಕ್ ಆ್ಯಂಟಿಜೆನ್ (ಪಿಎಸ್‌ಎ) ಮಟ್ಟವನ್ನು ಹೆಚ್ಚಿಸುತ್ತದೆ. ಪಿಎಸ್‌ಎ ಪ್ರಾಸ್ಟೇಟ್ ಗ್ರಂಥಿಯು ಉತ್ಪಾದಿಸುವ ಪ್ರೋಟಿನ್ ಆಗಿದೆ. ಪಿಎಸ್‌ಎ ಪರೀಕ್ಷೆಯು ರಕ್ತದಲ್ಲಿ ಈ ಪ್ರೋಟಿನ್‌ನ ಮಟ್ಟವನ್ನು ಅಳೆಯುತ್ತದೆ. ಪ್ರಾಸ್ಟೇಟ್ ಕ್ಯಾನ್ಸರ್ ಪಿಎಸ್‌ಎ ಮಟ್ಟವನ್ನು ಹೆಚ್ಚಿಸುತ್ತದೆಯಾದರೂ, ಮಟ್ಟ ಹೆಚ್ಚಲು ಅದೊಂದೇ ಕಾರಣವಲ್ಲ. ಪ್ರಾಸ್ಟೆಟೈಟಿಸ್(ಪ್ರಾಸ್ಟೇಟ್ ಗ್ರಂಥಿಯ ಉರಿಯೂತ) ಮತ್ತು ಬಿನೈನ್ ಪ್ರಾಸ್ಟೇಟ್ ಹೈಪರ್‌ಪ್ಲಾಸಿಯಾ ಅಥವಾ ಬಿಪಿಎಚ್(ಪ್ರಾಸ್ಟೇಟ್ ದೊಡ್ಡದಾಗುವಿಕೆ)ಯಂತಹ ಇತರ ವೈದ್ಯಕೀಯ ಸ್ಥಿತಿಗಳಿಂದಲೂ ರಕ್ತದಲ್ಲಿ ಪಿಎಸ್‌ಎ ಮಟ್ಟ ಹೆಚ್ಚಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X