ಕೊರೋನ ಗೆದ್ದ ನಾಲ್ಕು ತಿಂಗಳ ಕಂದಮ್ಮ

ಸಾಂದರ್ಭಿಕ ಚಿತ್ರ
ಆಂಧ್ರ ಪ್ರದೇಶ, ಜೂ.13: ಸತತ 18 ದಿನಗಳ ಕಾಲ ಕೃತಕ ಉಸಿರಾಟ ವ್ಯವಸ್ಥೆಯ ಬೆಂಬಲದಲ್ಲಿದ್ದ ನಾಲ್ಕು ತಿಂಗಳ ಪುಟ್ಟ ಮಗುವೊಂದು ಕೊರೋನ ವೈರಸ್ ವಿರುದ್ಧದ ಯುದ್ಧದಲ್ಲಿ ಗೆದ್ದ ಅಪರೂಪದ ಘಟನೆ ವರದಿಯಾಗಿದೆ.
ಕೊರೋನ ವೈರಸ್ ಸೊಂಕು ಪರೀಕ್ಷೆಯ ಫಲಿತಾಂಶ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಆಸ್ಪತ್ರೆಯಿಂದ ಮಗು ಇದೀಗ ಬಿಡುಗಡೆಯಾಗಿದೆ. ಶುಕ್ರವಾರ ಸಂಜೆ ಮಗುವಿನ ಆರೋಗ್ಯ ತಪಾಸಣೆ ನಡೆಸಿದ ಬಳಿಕ ವಿಶಾಖಪಟ್ಟಣಂ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಿಂದ ಮಗುವನ್ನು ಬಿಡುಗಡೆ ಮಾಡಲಾಯಿತು ಎಂದು ಜಿಲ್ಲಾಧಿಕಾರಿ ವಿನಯ್ ಚಂದ್ ಹೇಳಿದ್ದಾರೆ.
ಲಕ್ಷ್ಮಿ ಹೆಸರಿನ ಪೂರ್ವ ಗೋದಾವರಿ ಜಿಲ್ಲೆಯ ಬುಡಕಟ್ಟು ಮಹಿಳೆಗೆ ಕೊರೋನ ಸೋಂಕು ದೃಢಪಟ್ಟಿತ್ತು. ಬಳಿಕ ನಾಲ್ಕು ತಿಂಗಳ ಮಗುವನ್ನು ಪರೀಕ್ಷಿಸಿದಾಗ ಮಗುವಿಗೂ ಸೋಂಕು ತಗುಲಿರುವುದು ಪತ್ತೆಯಾಯಿತು ಎಂದು ಅವರು ವಿವರಿಸಿದ್ದಾರೆ.
ಮಗುವನ್ನು ಬಳಿಕ ವಿಶಾಖಪಟ್ಟಣಂ ವಿಮ್ಸ್ ಆಸ್ಪತ್ರೆ ಮೇ 25ರಂದು ದಾಖಲಿಸಲಾಯಿತು. 18 ದಿನಗಳ ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದ ಮಗುವನ್ನು ಕೋವಿಡ್-19 ಪರೀಕ್ಷೆಗೆ ಮತ್ತೆ ಗುರಿಪಡಿಸಿದಾಗ ಫಲಿತಾಂಶ ನೆಗೆಟಿವ್ ಬಂತು ಎಂದು ತಿಳಿಸಿದ್ದಾರೆ.