ಕೊರೋನ ವೈರಸ್ ನ ಹೊಸ ಲಕ್ಷಣಗಳನ್ನು ಪ್ರಕಟಿಸಿದ ಆರೋಗ್ಯ ಸಚಿವಾಲಯ
ಹೊಸದಿಲ್ಲಿ: ಆರೋಗ್ಯ ವೃತ್ತಿಪರರಿಗಾಗಿ ಪ್ರಕಟಿಸಲಾದ ಮಾಹಿತಿಯಲ್ಲಿ ಕೇಂದ್ರ ಸರಕಾರವು ಕೊರೋನ ವೈರಸ್ ನ ಹೊಸ ಲಕ್ಷಣಗಳನ್ನು ಸೇರಿಸಿದೆ. ‘ವಾಸನೆ ಮತ್ತು ರುಚಿಯನ್ನು ಗ್ರಹಿಸಲು ಸಾಧ್ಯವಾಗದೆ ಇರುವುದು’ ಸರಕಾರ ಪ್ರಕಟಿಸಿದ ಕೊರೋನ ವೈರಸ್ ನ 9 ಲಕ್ಷಣಗಳ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಯಾಗಿದೆ.
ಇತರ ಲಕ್ಷಣಗಳೆಂದರೆ ಜ್ವರ, ಕೆಮ್ಮು, ಆಯಾಸ, ಉಸಿರಾಟದ ತೊಂದರೆ, ಮೈಕೈ ನೋವು, ಮೂಗಿನಿಂದ ನೀರು ಇಳಿಯುವುದು, ಗಂಟಲು ಕೆರೆತ, ಮಲಬದ್ಧತೆ.
ಮಾತನಾಡುವಾಗ, ಸೀನುವಾಗ ಅಥವಾ ಮಾತನಾಡುವಾಗ ಸೋಂಕು ಪೀಡಿತ ವ್ಯಕ್ತಿಯ ಬಾಯಿಯಿಂದ ಹಾರುವ ಹನಿಗಳಿಂದ ನೇರವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಸೋಂಕು ಹರಡುತ್ತದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
Next Story