ಕೆಪಿಸಿಸಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಯಶಸ್ಸಿಗೆ ಕರೆ

ಉಡುಪಿ, ಜೂ.13: ಗ್ರಾಮೀಣ ಮಟ್ಟದ ಕಾರ್ಯಕರ್ತರೂ ಕೂಡಾ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕಾರ್ಯಾಧ್ಯಕ್ಷರುಗಳಾದ ಸಲೀಂ ಅಹ್ಮದ್, ಸತೀಶ್ ಜಾರಕಿಹೋಳಿ, ಈಶ್ವರ ಖಂಡ್ರೆ ಹಾಗೂ ಕಾರ್ಯಕರ್ತರ ಅಧಿಕಾರ ಸ್ವೀಕಾರ ಪ್ರತಿಜ್ಞಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೆಪಿಸಿಸಿ ಕೋ ಅರ್ಡಿನೇಟರ್ ಹರೀಶ್ ಕಿಣಿ ತಿಳಿಸಿದ್ದಾರೆ.
ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್(ನಗರ) ಸಮಿತಿಯ ವತಿಯಿಂದ ಇತ್ತೀಚೆಗೆ ಆಯೋಜಿಸಲಾದ ವೇಣೂರು, ಕಾಶಿಪಟ್ನ, ಅಡಿಂಜೆ, ಮರೋಡಿ, ವೇಣೂರು ಗ್ರಾಮೀಣ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅರು ಮಾತನಾಡುತಿದ್ದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಯುವ ಕಾಂಗ್ರೆಸ್ ಮುಂದಾಳು ಶಬರೀಶ್ ಸುವರ್ಣ, ಗ್ರಾಪಂ ಅಧ್ಯಕ್ಷರುಗಳಾದ ಸತೀಶ್ ಕಾಶಿಪಟ್ನ, ಸದಾನಂದ ಶೆಟ್ಟಿ ಮರೋಡಿ, ರವೀಂದ್ರ ಪೂಜಾರಿ, ಕಾಂಗ್ರೆಸ್ ಮುಖಂಡರುಗಳಾದ ಅರವಿಂದ ಶೆಟ್ಟಿ, ರಾಜು ಪೂಜಾರಿ, ದಿವಾಕರ ಭಂಡಾರಿ, ಜೀವಂಧರ್ ಜೈನ್, ಸೂರ್ಯ ನಾರಾಯಣ ಪೂಜಾರಿ, ಪ್ರವೀಣ್ ಡಿಸೋಜ, ಮೊಹಮದ್ ಶಫಿ, ದೇಜಪ್ಪ ಶೆಟ್ಟಿ ಉಪಸ್ಥಿತರಿದ್ದರು.







