ಚೀನಾದಲ್ಲಿ ಮತ್ತೆ ಕೊರೋನ ವೈರಸ್ ಆತಂಕ: ಬೀಜಿಂಗ್‌ನ ಹಲವು ಭಾಗಗಳಿಗೆ ಬೀಗ

ಬೀಜಿಂಗ್, ಜೂ. 13: ಚೀನಾದಲ್ಲಿ ಆರು ಹೊಸ ಕೊರೋನವೈರಸ್ ಪ್ರಕರಣಗಳು ವರದಿಯಾದ ಬಳಿಕ, ಶನಿವಾರ ರಾಜಧಾನಿ ಬೀಜಿಂಗ್‌ನ ಕೆಲವು ಭಾಗಗಳಿಗೆ ಬೀಗ ಹಾಕಲಾಗಿದೆ. ಇದು ಎರಡನೇ ಸುತ್ತಿನ ಸ್ಥಳೀಯ ಸೋಂಕಿನ ಭೀತಿಯನ್ನು ಹುಟ್ಟಿಸಿದೆ.
ದಕ್ಷಿಣ ಬೀಜಿಂಗ್‌ನ ಫೆಂಗ್‌ಟೈ ಜಿಲ್ಲೆಯ 11 ಜನವಸತಿ ಸ್ಥಳಗಳ ಜನರು ಮನೆಗಳಿಂದ ಹೊರಬರುವುದನ್ನು ನಿಷೇಧಿಸಲಾಗಿದೆ ಎಂದು ನಗರದ ಅಧಿಕಾರಿಗಳು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಹೊಸದಾಗಿ ವರದಿಯಾಗಿರುವ ಸೋಂಕು ಪ್ರಕರಣಗಳ ಪೈಕಿ ಹೆಚ್ಚಿನವು ಸಮೀಪದ ಮಾಂಸ ಮಾರುಕಟ್ಟೆಯೊಂದರ ಜೊತೆ ನಂಟು ಹೊಂದಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಬೀಜಿಂಗ್‌ನಲ್ಲಿ ಎರಡು ತಿಂಗಳ ಬಳಿಕ ಮೊದಲ ಕೊರೋನ ವೈರಸ್ ಸೋಂಕು ಪ್ರಕರಣವು ಗುರುವಾರ ವರದಿಯಾಗಿದೆ. ಸೋಂಕು ಹೊಂದಿರುವ ವ್ಯಕ್ತಿಯು ಇತ್ತೀಚೆಗೆ ನಗರದಿಂದ ಹೊರಹೋಗಿರುವ ದಾಖಲೆಯಿಲ್ಲ. ಆದರೆ, ಆ ವ್ಯಕ್ತಿಯು ಕಳೆದ ವಾರ ಬೀಜಿಂಗ್‌ನ ಕ್ಸಿನ್‌ಫಡಿ ಮಾಂಸ ಮಾರುಕಟ್ಟೆಗೆ ಹೋಗಿದ್ದರು.
Next Story





