ಎ.ಜೆ. ಆಸ್ಪತ್ರೆಯಿಂದ ಜೂ.14-ಜು.14ರವರೆಗೆ ರಕ್ತದಾನ ಮಾಸಾಚರಣೆ
ಮಂಗಳೂರು, ಜೂ.13: ವಿಶ್ವ ರಕ್ತದಾನದ ದಿನದ ಅಂಗವಾಗಿ ಎ.ಜೆ.ಆಸ್ಪತ್ರೆಯ ವತಿಯಿಂದ 2020ರ ಜೂನ್ 14ರಿಂದ ಜುಲೈ 14ರವರೆಗೆ ಆಸ್ಪತ್ರೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಮಾಸಾಚರಣೆಯನ್ನು ಹಮ್ಮಿ ಕೊಂಡಿದೆ.
ಈ ಸಂದರ್ಭದಲ್ಲಿ ಹೊರರೋಗಿಗಳ ಪರೀಕ್ಷ ತಪಾಸಣಾ ವಿಭಾಗದಲ್ಲಿ ಶೇ20 ರೀಯಾಯಿತಿ ನೀಡುವ ಪ್ರಿವಿಲೇಜ್ ಕಾರ್ಡ್‌ನ್ನು ರಕ್ತದಾನಿಗಳಿಗೆ ನೀಡಲಾಗುವುದು. ಕೊವಿಡ್ -19 ಹಿನ್ನಲೆಯಲ್ಲಿ ಸಾಕಷ್ಟು ಜನರು ಆಸ್ಪತ್ರೆಗೆ ತೆರಳಿ ರಕ್ತ ದಾನ ಮಾಡಲು ಹಿಂಜರಿಯುತ್ತಿದ್ದಾರೆ. ಆಸ್ಪತ್ರೆಗೆ ಬಂದು ರಕ್ತದಾನ ಮಾಡುವ ರಕ್ತದಾನಿಗಳು ಹಾಗೂ ರೋಗಿಗಳ ಸುರಕ್ಷತೆಗೆ ಎ.ಜೆ.ಆಸ್ಪತ್ರೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದೆ. ರಕ್ತದಾನ ಮಾಡಲಿಚ್ಛಿಸುವ ದಾನಿಗಳು ರಕ್ತದಾನ ಮಾಡಲು 72 59978600 ಸಂಖ್ಯೆಗೆ ಕರೆ ಮಾಡಬಹುದು ಎಂದು ಎ.ಜೆ.ಸಂಸ್ಥೆಯ ಮೆಡಿಕಲ್ ಡೈರೆಕ್ಟರ್ ಡಾ.ಪ್ರಶಾಂತ್ ಮಾರ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
18ರಿಂದ 60 ವರ್ಷ ವಯೋಮಾನದ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ಗಂಡಸರು 3 ತಿಂಗಳಿಗೊಮ್ಮೆ ಹೆಂಗಸರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ದಾನಿಯ ದೇಹದ ತೂಕ 46 ಕೆ.ಜಿ ಗಿಂತ ಹೆಚ್ಚಿರಬೇಕು. ರಕ್ತದಾನಿಯ ಹಿಮೋಗ್ಲೋಬಿನ್ ಅಂಶ 12.5ಕ್ಕಿಂತ ಹೆಚ್ಚಿರಬೇಕು. ರಕ್ತದಾನದಿಂದ ದಾನಿಗೂ ಸಾಕಷ್ಟು ಪ್ರಯೋಜನೆಗಳಿವೆ. ಹೊಸ ರಕ್ತದ ಉತ್ಪಾದದನೆ ಹೆಚ್ಚಿಸುತ್ತದೆ. ಹೃದಯ ಘಾತವನ್ನು ತಗ್ಗಿಸುತ್ತದೆ. ಕ್ಯಾನ್ಸರ್, ರಕ್ತದೊತ್ತಡ, ರಕ್ತನಾಳಗಳ ವೈಪರೀತ್ಯದ ಅಪಾಯವನ್ನು ಕಡಿಮೆ ಗೊಳಿಸುತ್ತದೆ. ಮುಕ್ತ ರಕ್ತ ತಪಾಸಣೆ ನಡೆಸಿದಂತಾಗುತ್ತದೆ. ರಕ್ತದ ಪ್ಲೇಟ್‌ಲೆಟ್‌ಗಳನ್ನು ದಾನ ಮಾಡಬಹದು 48 ಗಂಟೆಗಳೊಳಗೆ ಹೊಸ ಪ್ಲೇಟ್‌ಲೆಟ್ ದಾನಿಯ ದೇಹಕ್ಕೆ ಮರು ಸೇರ್ಪಡೆಗೊಳ್ಳುತ್ತದೆ. ದಾನಿಯ ಪ್ಲೇಟ್‌ಲೆಟ್ ಸಂಖ್ಯೆ 2ಲಕ್ಷಕ್ಕಿಂತ ಹೆಚ್ಚಿರಬೇಕು ಹೀಗಿರುವ ದಾನಿ ತಿಂಗಳಿಗೆ ನಾಲ್ಕು ಬಾರಿ ಪ್ಲೇಟ್‌ಲೆಟ್ ದಾನ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.