ಬೈಕಂಪಾಡಿಯಲ್ಲಿ ರಸ್ತೆ ಅಪಘಾತ : ಮಗು ಮೃತ್ಯು, ದಂಪತಿಗೆ ಗಂಭೀರ ಗಾಯ

ಮಂಗಳೂರು, ಜೂ.14: ಬೈಕಂಪಾಡಿ ಜಂಕ್ಷನ್ ಬಳಿ ಲಾರಿಯೊಂದು ಢಿಕ್ಕಿಯಾದ ಪರಿಣಾಮ ಸ್ಕೂಟರ್‌ನಲ್ಲಿದ್ದ 4 ವರ್ಷದ ಮಗುವೊಂದು ಗಂಭೀರ ಗಾಯಗೊಂಡು ಮೃತಪಟ್ಟು, ದಂಪತಿ ಗಾಯಗೊಂಡ ಘಟನೆ ರವಿವಾರ ಸಂಜೆ ಸುಮಾರಿಗೆ ನಡೆದಿದೆ.
ಕೃಷ್ಣಾಪುರ ನಿವಾಸಿ ಶಯಾನ್ (4) ಮೃತಪಟ್ಟ ಮಗು. ಕೃಷ್ಣಾಪುರ ನಿವಾಸಿಯಾದ ಅಬ್ದುಲ್ ಬಶೀರ್ ಅವರು ಸ್ಕೂಟರ್‌ನಲ್ಲಿ ಪತ್ನಿ ಶಯೀದಾ ಮತ್ತು ಮಗ ಶಯಾನ್ ಜತೆ ಸಂಜೆ ವೇಳೆಗೆ ಮಂಗಳೂರಿನಿಂದ ಕೃಷ್ಣಾಪುರಕ್ಕೆ ತೆರಳುತ್ತಿದ್ದಾಗ ಬೈಕಂಪಾಡಿ ಜಂಕ್ಷನ್ ಬಳಿ ಲಾರಿಯೊಂದು ಸ್ಕೂಟರ್‌ಗೆ ಢಿಕ್ಕಿಯಾಗಿದೆ. ಇದರಿಂದ ಮೂವರು ಕೂಡ ರಸ್ತೆಗೆ ಬಿದ್ದಿದ್ದು, ಮಗು ಶಯಾನ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದೆ. ಗಾಯಗೊಂಡ ಶಯೀದಾ ಹಾಗೂ ಬಶೀರ್ ಅವರನ್ನು ಸ್ಥಳೀಯರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಂಗಳೂರು ನಗರ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





