ಎಚ್‌ಆರ್‌ಎಸ್‌ನಿಂದ ಕಾಪು ಪೊಲೀಸ್ ಠಾಣೆಗೆ ಸ್ಯಾನಿಟಿರೈಸ್ ಕಿಟ್ ಹಸ್ತಾಂತರ

ಕಾಪು, ಜೂ.14: ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗೆ ಹ್ಯುಮನಿಟೇರಿಯನ್ ರಿಲೀಫ್ ಸೊಸೈಟಿ ವತಿ ಯಿಂದ ನೀಡಲಾದ ಸ್ಯಾನಿಟಿರೈಸ್ ಕಿಟ್ಗಳನ್ನು ಠಾಣಾಧಿಕಾರಿ ರಾಜಶೇಖರ್ ಸಾಗನೂರು ಅವರಿಗೆ ಹಸ್ತಾಂತರಿಸಲಾಯಿತು.
ಕಾಪು ವರ್ತುಲದ ಅಧ್ಯಕ್ಷ ಅನ್ವರ್ ಅಲಿ ಕಾಪು ಮಾತನಾಡಿ, ಜಮಾಅತೆ ಇಸ್ಲಾಮೀ ಹಿಂದ್ ಲಾಕ್‌ಡೌನ್ ಸಂದರ್ಭದಲ್ಲಿ ದೇಶದಲ್ಲಿ ಎ.23ರವರೆಗೆ 23.73ಕೋಟಿ ರೂ. ಮತ್ತು ಉಡುಪಿ ಜಿಲ್ಲೆಯಲ್ಲಿ 52 ಲಕ್ಷ ರೂ. ಮೊತ್ತದ ಆಹಾರ ಸಾಮಗ್ರಿ ಕಿಟ್, ವಲಸಿಗರಿಗೆ ಆಹಾರ, ಮುಖಗವಸು, ಸ್ಯಾನಿಟಿರೈಸ್, ಔಷದೋಪಚಾರಕ್ಕಾಗಿ ವಿನಿಯೋಗಿಸಲಾಗಿದೆ ಎಂದರು.
ಈ ಸಂದರ್ಭ ಸಹಾಯಕ ಠಾಣಾಧಿಕಾರಿ ರಾಜೇಂದ್ರ ಮಣಿಯಾಣಿ, ಜಮಾಅತೆ ಇಸ್ಲಾಮೀ ಹಿಂದ್‌ನ ಮುಹಮ್ಮದ್ ಇಕ್ಬಾಲ್ ಸಾಹೇಬ್, ಮುಹಮ್ಮದ್ ಅಲಿ, ಎಸ್‌ಐಓನ ಹೊಣೆಗಾರ ಅನೀಸ್ ಅಲಿ ಉಪಸ್ಥಿತರಿದ್ದರು.
Next Story





