ಸಜೀಪ ಮುನ್ನೂರು ಎಸ್ ಡಿಪಿಐಯಿಂದ ಚರಂಡಿಯ ಹೂಳು ತೆರವು, ಸ್ವಚ್ಛತಾ ಕಾರ್ಯ

ಬಂಟ್ವಾಳ, ಜೂ. 14: ಎಸ್ ಡಿಪಿಐ ಆಲಾಡಿ ಯುನಿಟ್ ವತಿಯಿಂದ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ಕೊಪ್ಪಳ, ಶಾರದ ನಗರ, ಆಲಾಡಿ, ಮುಂಡಕೋಡಿ ಇಂದಿರಾ ನಗರದ ವರೆಗಿನ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಾಣ ಹಾಗೂ ಸ್ವಚ್ಛತಾ ಕಾರ್ಯ ರವಿವಾರ ನಡೆಸಲಾಯಿತು.
ಚರಂಡಿಗಳಲ್ಲಿ ಹೂಳು ತುಂಬಿದ್ದರಿಂದ ಮಳೆ ನೀರು ಸರಿಯಾಗಿ ಹರಿಯದೆ ರಸ್ತೆಯಲ್ಲಿ ಹರಿಯುತ್ತಿತ್ತು. ಅಲ್ಲದೆ ರಸ್ತೆ ಬದಿಯಲ್ಲಿ ಗಿಡಗಳು ಬೆಳೆದು ನಿಂತಿದ್ದವು. ಈ ಹಿನ್ನೆಲೆಯಲ್ಲಿ ಎಸ್ ಡಿಪಿಐ ಕಾರ್ಯಕರ್ತರು ಹಾಗೂ ಪಕ್ಷದ ಸ್ಥಳೀಯ ಮುಖಂಡರು ಶ್ರಮದಾನ ನಡೆಸಿ ರಸ್ತೆ ಬದಿಯ ಗಿಡಗಳನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯ ನಡೆಸಿದರು. ಅಲ್ಲದೆ ಚರಂಡಿಯಲ್ಲಿ ತುಂಬಿದ್ದ ಹೂಳನ್ನು ತೆಗೆದು ಮಳೆ ನೀರು ಸರಿಯಾಗಿ ಹರಿಯುವಂತೆ ಮಾಡಿದರು.
ಈ ಸಂದರ್ಭದಲ್ಲಿ ಎಸ್ ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಸಲೀಂ ಆಲಂಪಾಡಿ, ಸಜೀಪ ಮುನ್ನೂರು ಮತ್ತು ಮೂಡ ಗ್ರಾಮ ಸಮಿತಿಯ ಅಧ್ಯಕ್ಷ ಉಮರ್ ಫಾರೂಲ್ ಆಲಾಡಿ, ಎಸ್ ಡಿಟಿಯು ಬಂಟ್ವಾಳ ಕ್ಷೇತ್ರ ಸಮಿತಿಯ ಅಧ್ಯಕ್ಷ ಖಾದರ್ ಆಲಾಡಿ, ಎಸ್ ಡಿಪಿಐ ಆಲಾಡಿ ಯುನಿಟ್ ಅಧ್ಯಕ್ಷ ಶರೀಫ್ ಕೊಪ್ಪಳ, ಆಲಾಡಿ ಗ್ರಾಮ ಪಂಚಾಯತ್ ಸದಸ್ಯ ಮಜೀದ್ ಶಾರದಾ ನಗರ ಉಪಸ್ಥಿತರಿದ್ದರು.










