ಮೈಸೂರು: ಕೊರೋನ ವೈರಸ್ ಬಗ್ಗೆ ಸುಳ್ಳು ಸುದ್ದಿ ; ಆರೋಪಿ ಸೆರೆ

ಮೈಸೂರು : ನಂಜನಗೂಡಿನ ಹಲವು ಬಡಾವಣೆಯ ಜನರಿಗೆ ಕೊರೋನ ವೈರಸ್ ಹರಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ನಂಜನಗೂಡು ಪೊಲೀಸರು ಬಂಧಿಸಿದ್ದಾರೆ.
ನಂಜನಗೂಡಿನ ಪ್ರಜ್ವಲ್ ಕಶ್ಯಪ್ ಬಂಧಿತ ಆರೋಪಿ. ಈತ ನಂಜನಗೂಡು ನಗರದ ಶಂಕರಪುರ, ತ್ಯಾಗರಾಜ ಕಾಲನಿ, ಸರಸ್ವತಿ ಕಾಲನಿ ಮತ್ತು ಬಸವನಗುಡಿ ಬಡಾವಣೆಗಳ ಐದು ಮಂದಿಗೆ ಕೊರೋನ ಸೋಂಕು ತಗುಲಿದೆ ಎಂದು ಸುಳ್ಳು ಸುದ್ದಿಯನ್ನು ಫೇಸ್ ಬುಕ್ ಪೋಸ್ಟ್ ಮಾಡಿದ್ದ. ಇದರಿಂದ ಕಾರ್ಖಾನೆಗೆಂದು ಕೆಲಸಕ್ಕೆ ತೆರಳಿದ್ದ ಈ ಬಡಾವಣೆಯ ಕಾರ್ಮಿಕರನ್ನು ಕೆಲಸದಿಂದ ಹಿಂದಕ್ಕೆ ಕಳುಹಿಸಲಾಗಿತ್ತು. ಆತಂಕಕ್ಕೊಳಗಾದ ಕಾರ್ಮಿಕರು ದಲಿತ ಸಂಘರ್ಷ ಸಮಿತಿ ಮೊರೆ ಹೋಗಿದ್ದರು.
ದಸಂಸ ಮುಖಂಡರು ಈ ಬಗ್ಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Next Story





