ಎಸ್.ಎಂ. ಕೃಷ್ಣ ಮನೆಯಲ್ಲಿ ಪುತ್ರಿಯ ತಾಂಬೂಲ ಶಾಸ್ತ್ರ ಮುಗಿಸಿದ ಡಿಕೆಶಿ ಕುಟುಂಬ

ಬೆಂಗಳೂರು: ಪುತ್ರಿ ಐಶ್ವರ್ಯರ ವಿವಾಹಕ್ಕೆ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿರುವ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇಂದು ವರ ನೋಡುವ ಶಾಸ್ತ್ರವನ್ನ ಮುಗಿಸಿದ್ದಾರೆ.
ಕೆಫೆ ಕಾಫಿ ಡೇ ಮುಖ್ಯಸ್ಥ ಸಿದ್ಧಾರ್ಥ್ರ ಪುತ್ರ, ಮಾಜಿ ಸಿಎಂ ಎಸ್.ಎಂ. ಕೃಷ್ಣ ಮೊಮ್ಮಗ ಅಮಾರ್ತ್ಯ ಹೆಗ್ಡೆ ಜೊತೆ ಐಶ್ವರ್ಯ ವಿವಾಹ ನಿಶ್ಚಯವಾಗಿದೆ ಅಂತ ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು. ಇದೀಗ ಡಿ.ಕೆ. ಶಿವಕುಮಾರ್ ವರ ನೋಡುವ ಶಾಸ್ತ್ರವನ್ನ ಮುಗಿಸಿದ್ದು, ಶೀಘ್ರದಲ್ಲೇ ವಿವಾಹದ ದಿನಾಂಕ ನಿಶ್ಚಯವಾಗುವ ಸಾಧ್ಯತೆ ಇದೆ.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಎಸ್ಸೆಎಂ ಕೃಷ್ಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್, ಕಾಫೀ ಡೇ ಸಿದ್ಧಾರ್ಥ ಮತ್ತು ಡಿಕೆಶಿ ಕುಟುಂಬದ ಸದಸ್ಯರು ಹಾಜರಿದ್ದರು.







.jpeg)
.jpeg)

