ಪ್ರತ್ಯೇಕ ಪ್ರಕರಣ: ಬಾವಿಗೆ ಬಿದ್ದು ಇಬ್ಬರ ಮೃತ್ಯು
ಕಾಪು, ಜೂ.15: ವಯೋವೃದ್ಧ ಕಾಯಿಲೆಯಿಂದ ಬಳಲುತ್ತಿದ್ದ ಉದ್ಯಾವರ ಶಂಭುಕಲ್ಲು ದೇವಸ್ಥಾನದ ಬಳಿಯ ನಿವಾಸಿ ಸೀತಾ ಸೇರಿಗಾರ್ ಎಂಬವರು ಜೂ.14ರಂದು ಮಧ್ಯಾಹ್ನ ವೇಳೆ ನೆರೆಮನೆಯ ಬಾವಿಯನ್ನು ಇಣುಕಿ ನೋಡುವಾಗ ಆಯತಪ್ಪಿನೀರಿಗೆ ಬಿದ್ದು ಮುಳುಗಿ ಮೃತ ಪಟ್ಟಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ಮುಡಾರು ಗ್ರಾಮದ ದಿಡಿಂಬಿರಿ ಹರಿಜನ ಕಾಲೋನಿಯಲ್ಲಿ ಒಂಟಿಯಾಗಿ ವಾಸವಾಗಿರುವ ಚೋನ(90) ಎಂಬವರು ಜೂ.14ರಂದು ರಾತ್ರಿ ಮೂತ್ರ ವಿರ್ಸಜನೆಗೆ ಹೋದ ವೇಳೆ ಮನೆ ಎದುರಿನ ಆಳವಾದ ಬಾವಿಗೆ ಅಕಸ್ಮಿಕವಾಗಿ ಬಿದ್ದು ಮೃತ ಪಟ್ಟಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





