ಹೊನ್ನಾಳ ಉರ್ದು ಶಾಲಾ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆ
ಬ್ರಹ್ಮಾವರ, ಜೂ.15: ಹೊನ್ನಾಳ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆ ಇತ್ತೀಚೆಗೆ ಸಂಘದ ಉಪಾಧ್ಯಕ್ಷ ಜಾಫರ್ ಸಾಹೇಬ್ಅಧ್ಯಕ್ಷತೆಯಲ್ಲಿ ನಡೆಯಿತು.
ಗತವರ್ಷದ ಲೆಕ್ಕಾಚಾರದ ನಂತರ ನೂತನ ವರ್ಷಕ್ಕೆ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಜೆ.ಮುಸ್ತಾಕ್ ಅಹ್ಮದ್, ಪ್ರಧಾನ ಕಾರ್ಯ ದರ್ಶಿಯಾಗಿ ಮಹಮ್ಮದ್ ಇಮ್ತಿಯಾಜ್, ಸಂಘಟನಾ ಕಾರ್ಯದರ್ಶಿಯಾಗಿ ಎಚ್.ಸುಭಾನ್ ಅಹ್ಮದ್, ಕೋಶಾಧಿಕಾರಿಯಾಗಿ ಜಾಫರ್ ಸಾಧಿಕ್, ಕಾರ್ಯಾಧ್ಯಕ್ಷರಾಗಿ ಪಿ.ಮಹಮ್ಮದ್ ಗೌಸ್, ಗೌರವಾಧ್ಯಕ್ಷರಾಗಿ ಮೊಹಮ್ಮದ್ ಗೌಸ್ ಕೆ., ಉಪಾಧ್ಯಕ್ಷರಾಗಿ ಬಿ.ಎಸ್.ಶುಕುರ್, ಖತೀಬ್ ಅಕ್ಬರ್, ಮೊಹಮ್ಮದ್ ಆತಿಕ್, ಕಾರ್ಯದರ್ಶಿಗಳಾಗಿ ಮಹಮ್ಮದ್ ಸಾಹಿಲ್, ಮೊಹಮ್ಮದ್ ಅಷದ್‌ರ್, ಖಾದಿರ್ ಸಾಹೇಬ್ ಆಯ್ಕೆಯಾದರು.
ಪತ್ರಿಕಾ ಕಾರ್ಯದರ್ಶಿಯಾಗಿ ಶಕೀಲ್ ಹಸನ್, ಲೆಕ್ಕ ಪರಿಶೋಧಕರಾಗಿ ತೌಸಿಫ್ ನೂರಿ, ಗೌರವ ಸಲಹೆಗಾರರಾಗಿ ಮೊಹಮ್ಮದ್ ಹನೀಫ್, ಇಮಾಮ್ ಸಾಹೇಬ್ ಟಂಕಸಾಲಿ ಹಾಗೂ 22 ಮಂದಿಯ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು. ಮೊಹಮ್ಮದ್ ಆತೀಕ್ ಸ್ವಾಗತಿಸಿ ದರು. ಮೊಹಮ್ಮದ್ ಅರ್ಷದ್ ವಂದಿಸಿದರು. ಮಹಮ್ಮದ್ ಇಮಿ್ತಯಾಜ್ ಕಾರ್ಯಕ್ರಮ ನಿರೂ ಪಿಸಿದರು.





