ಘಾನಾ ಆರೋಗ್ಯ ಸಚಿವರಿಗೆ ಕೊರೋನ ವೈರಸ್ ಸೋಂಕು

ಅಕ್ರ (ಘಾನಾ), ಜೂ. 15: ಘಾನಾದ ಆರೋಗ್ಯ ಸಚಿವ ಕ್ವಾಕು ಅಗ್ಯೆಮಂಗ್-ಮನು ಕೊರೋನ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಈಗ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೇಶದ ಅಧ್ಯಕ್ಷ ನಾನಾ ಅಕುಫೊ ಅಡ್ಡೊ ರವಿವಾರ ಹೇಳಿದ್ದಾರೆ.
ಕೊರೋನ ವೈರಸ್ ವಿರುದ್ಧದ ಹೋರಾಟದ ವೇಳೆ ಆರೋಗ್ಯ ಸಚಿವರಿಗೆ ಸೋಂಕು ತಗಲಿದೆ ಎಂದು ರವಿವಾರ ರಾತ್ರಿ ದೇಶವನ್ನು ಉದ್ದೇಶಿಸಿ ಟಿವಿಯಲ್ಲಿ ಮಾಡಿದ ಭಾಷಣದಲ್ಲಿ ಅವರು ತಿಳಿಸಿದರು.
ಪಶ್ಚಿಮ ಆಫ್ರಿಕದ ದೇಶವಾಗಿರುವ ಘಾನಾದಲ್ಲಿ ಅಧಿಕ ಸಂಖ್ಯೆಯ ಸೋಂಕು ಪ್ರಕರಣಗಳು ವರದಿಯಾಗಿವೆ. ಅಲ್ಲಿ 11,400ಕ್ಕೂ ಅಧಿಕ ಸೋಂಕು ಪ್ರಕರಣಗಳನ್ನು ಈವರೆಗೆ ಪತ್ತೆಹಚ್ಚಲಾಗಿದೆ ಹಾಗೂ 51 ಸಾವುಗಳು ವರದಿಯಾಗಿವೆ.
Next Story





