ಮೂಡುಶೆಡ್ಡೆ: ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಗುರುಪುರ, ಜೂ.15: ಮೂಲ್ಕಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂಡುಶೆಡ್ಡೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಸೋಮವಾರ ನೂತನ ಕಾಂಕ್ರೀಟ್ ಮತ್ತು ಡಾಮರೀಕರಣ ರಸ್ತೆ ಉದ್ಘಾಟಿಸಿದರು. ಬಳಿಕ ಮೂರು ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ಸುಮಾರು 1.39 ಕೋ.ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಮೂಡುಶೆಡ್ಡೆಯ ಎದುರುಪದವು-ಪಿಲಿಕುಳ ಕಾಂಕ್ರೀಟ್ ರಸ್ತೆ ಹಾಗೂ ಮೂಡುಶೆಡ್ಡೆ-ಬೋಂದೆಲ್ ರಸ್ತೆ (ಅಗಲೀಕರಣ ಮತ್ತು ಡಾಮರೀಕರಣ) ಉದ್ಘಾಟಿಸಿ ಮಾತನಾಡಿದ ಶಾಸಕರು ಹೊಸ ರಸ್ತೆಗಳ ಮೂಲಕ ಗ್ರಾಮೀಣ ಭಾಗದಲ್ಲಿ ನಾಗರಿಕರಿಗೆ ಸಂಚಾರ ಸುಗಮವಾಗಲಿದೆ. ಯಾವುದೇ ಕಾರಣಕ್ಕೆ ಈ ರಸ್ತೆ (ಪಿಲಿಕುಳಕ್ಕೆ ಸಂಪರ್ಕ) ಬಂದ್ ಆಗಬಾರದು ಎಂದುಕೊಂಡಿರುವ ಸಾರ್ವಜನಿಕರ ಭಾವನಗಳಿಗೆ ಧಕ್ಕೆಯಾಗದಂತೆ ಕೆಲಸ ಮಾಡಿದ್ದೇನೆ ಎಂದರು.
ಮಳೆಹಾನಿ ಕೋಟಾದಡಿ 10 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ,10 ಲಕ್ಷ ರೂ. ವೆಚ್ಚದ ಮೂಡುಶೆಡ್ಡೆ ಶಿವನಗರ ಮುಖ್ಯರಸ್ತೆ ಕಾಂಕ್ರಿಟೀಕರಣ, 10 ಲಕ್ಷ ರೂ. ವೆಚ್ಚದ ಜಾರದ ಜಾರಂದಾಯ ದೈವಸ್ಥಾನ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭ ಮೂಡುಶೆಡ್ಡೆ ಗ್ರಾಪಂ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ತಾಪಂ ಸದಸ್ಯೆ ಕವಿತಾ ದಿನೇಶ್, ಮೂಡುಬಿದಿರೆ ಮಂಡಲ ಬಿಜೆಪಿ ಕಾರ್ಯದರ್ಶಿ ಹರೀಶ್ ಮೂಡುಶೆಡ್ಡೆ, ಗ್ರಾಪಂ ಸದಸ್ಯರಾದ ಗೋಪಾಲ ಮಡಿವಾಳ, ಮೋಹಿನಿ, ಗೀತಾ, ಯುವರಾಜ್, ಬಿಜೆಪಿ ಮುಖಂಡರಾದ ರಮಾನಾಥ ಅತ್ತರ್, ಸುರೇಶ್ ಕೊಟ್ಟಾರಿ, ಉಮೇಶ್ ಜೆ. ಉಪಸ್ಥಿತರಿದ್ದರು.







