ಜೂ.23ಕ್ಕೆ ದುಬೈಯಿಂದ ಮಂಗಳೂರಿಗೆ ಮೊತ್ತೊಂದು ಚಾರ್ಟೆಡ್ ವಿಮಾನ
ಭಟ್ಕಳ : ಭಟ್ಕಳದ ಉದ್ಯಮಿ ಹಾಗೂ ತಂಝೀಮ್ ಸಂಸ್ಥೆಯ ಉಪಾಧ್ಯಕ್ಷ ಅತಿಕುರ್ರಹ್ಮಾನ್ ಮುನಿರಿಯವರು ದುಬೈಯಲ್ಲಿ ಸಿಲುಕಿಕೊಂಡಿದ್ದ 184 ಮಂದಿಯನ್ನು ಚಾರ್ಟೆಡ್ ವಿಮಾನದ ಮೂಲಕ ಸುರಕ್ಷಿತವಾಗಿ ಭಟ್ಕಳಕ್ಕೆ ತಲುಪಿಸುವಲ್ಲಿ ಯಶಸ್ವಿಯಾದ ಬೆನ್ನಲ್ಲೇ ಜೂ.23 ರಂದು ರಾಸ್-ಅಲ್-ಖೈಮಾ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಹಾರಾಲು ಮತ್ತೊಂದು ಚಾರ್ಟೆಡೆ ವಿಮಾನ ಸಿದ್ಧಗೊಂಡಿದೆ.
ಕೊರೋನಾ ಲಾಕ್ಡೌನ್ ಕಾರಣ ಭಟ್ಕಳ ಮತ್ತು ಸುತ್ತಮುತ್ತಲಿನ 600ಕ್ಕೂ ಹೆಚ್ಚು ಮಂದಿ ದುಬೈಯಲ್ಲಿ ಸಂಕಷ್ಟದೊಂದಿಗೆ ಬದುಕುತ್ತಿದ್ದಾರೆ. ಲಾಕ್ಡೌನ್ ನಿಂದಾಗಿ ಹತಾಶರಾಗಿರುವ ಅವರು ತಮ್ಮ ತಾಯ್ನಾಡಿಗೆ ಮರಳು ಬಯಸಿದ್ದಾರೆ. ನಮ್ಮ ಮೊದಲ ಚಾರ್ಟೆಡ್ ವಿಮಾನ 184 ಮಂದಿಯನ್ನು ಸುರಕ್ಷಿತವಾಗಿ ಭಾರತಕ್ಕೆ ತಲುಪಿಸಿದ ನಂತರ ನಮ್ಮಲ್ಲಿ ಭರವಸೆಯೊಂದು ಮೂಡಿದ್ದು ಇನ್ನುಳಿದ ಜನರನ್ನೂ ಭಟ್ಕಳಕ್ಕೆ ಕಳುಹಿಸುವ ನಿರ್ಧಾರವನ್ನು ಕೈಗೊಂಡಿದ್ದೇವೆ. ಜೂನ್23ರಂದು 210 ಪ್ರಯಾಣಿಕರನ್ನು ಬಾಡಿಗೆ ವಿಮಾನದ ಮೂಲಕ ಭಟ್ಕಳ ತಲುಪಿಸಲಾಗುವುದು ಎಂದು ದುಬೈಯ ನೂಹಾ ಜನರಲ್ ಟ್ರೆಡಿಂಗ್ಸ್ ನ ಮಾಲಕ ಉದ್ಯಮಿ ಅತಿಕುರ್ರಹ್ಮಾನ್ ವಾರ್ತಾಭಾರತಿಗೆ ಮಾಹಿತಿ ನೀಡಿದ್ದಾರೆ.
ಹಿರಿಯ ಮುಖಂಡ ಎಸ್.ಎಂ.ಸೈಯ್ಯದ್ ಖಲೀಲುರ್ರಹ್ಮಾನ್ ಸಾಹೇಬರ ಮಾರ್ಗದರ್ಶನದಲ್ಲಿ ದುಬೈಯಲ್ಲಿರುವ ಅವರ ತಂಡದ ಸದಸ್ಯರಾದ ಜೈಲಾನಿ ಮೊಹತೇಶಮ್, ಶಹರಿಯಾರ್ ಖತೀಬ್, ಆಫಾಖ್ ನಾಯ್ತೆ, ರಹ್ಮತುಲ್ಲಾ ರಾಹಿ, ಯಾಸಿರ್ ಕಾಸಿಂಜಿ, ತಾಹಾ ಮುಅಲ್ಲಿಂ, ಮಾಝ್ ಶಾಬಂದ್ರಿ, ಸೈಫಾನ್ ಎಸ್.ಎಂ, ಫಹೀಮ್ ರಝಾ, ಅಬ್ದುಲ್ ಮುಖ್ಸಿತ್ ಎಂ.ಜೆ, ನೂರ್ ಇಕ್ಕೇರಿ, ಎಜಾಝ್ ಜುಕಾಕೋ ಮುಂತಾದವರು ಉದ್ಯಮಿ ಅತಿಕುರ್ರಹ್ಮಾನ್ ಮುನಿರಿಯವರಿಗೆ ಸಾತ್ ನೀಡುತ್ತಿದ್ದು ಎಲ್ಲರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಜೂನ್.12 ರಂದು ದುಬೈ ಹಾಗೂ ಯುಎಇ ಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಟ್ಕಳ, ಹೊನ್ನಾವರ, ಕುಮಟಾ, ಶೀರೂರು, ಮಂಕಿಯ 184ಜನರನ್ನು ಬಾಡಿಗೆ ವಿಮಾನದ ಮೂಲಕ ಯಶಸ್ವಿಯಾಗಿ ತಾಯ್ನಾಡಿಗೆ ತಲುಪಿಸಿದ್ದಾರೆ.
ಯುಎಇಯ ವಿವಿಧ ನಗರಗಳಲ್ಲಿ ಸಿಲುಕಿರುವ ತಮ್ಮ ತಾಯ್ನಾಡಿಗೆ ಮರಳಲು ಇಚ್ಚಿರುವವರು ngtairline@hotmail.com ಈ ಮೇಲ್ ವಿಳಾಸಕ್ಕೆ ತಮ್ಮ ಸಂಪೂರ್ಣ ಮಾಹಿತಿ ( ಪಾಸ್ಪೋರ್ಟ್ ಕಾಪಿಯ ಮೊದಲ ಮತ್ತು ಕೊನೆಯ ಪುಟದ ನಕಲು ಪ್ರತಿ, ದುಬೈಯ ಮೊಬೈಲ್ ಸಂಖ್ಯೆ, ಭಾರತದ ಮೊಬೈಲ್ ಸಂಖ್ಯೆ, ವಿಸಾ ವಿವರ, ಹಾಗೂ ಪ್ರಯಾಣಕ್ಕೆ ಕಾರಣ) ರವಾನಿಸಬೇಕೆಂದು ಕೋರಲಾಗಿದೆ.







