ದಿಲ್ಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಆಸ್ಪತ್ರೆಗೆ ದಾಖಲು; ಇಂದು ಕೊರೋನ ಟೆಸ್ಟ್
![ದಿಲ್ಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಆಸ್ಪತ್ರೆಗೆ ದಾಖಲು; ಇಂದು ಕೊರೋನ ಟೆಸ್ಟ್ ದಿಲ್ಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಆಸ್ಪತ್ರೆಗೆ ದಾಖಲು; ಇಂದು ಕೊರೋನ ಟೆಸ್ಟ್](https://www.varthabharati.in/sites/default/files/images/articles/2020/06/16/247514-1592283855.jpg)
ಹೊಸದಿಲ್ಲಿ, ಜೂ.16: ದಿಲ್ಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತೀವ್ರ ಜ್ವರ ಹಾಗೂ ಉಸಿರಾಟದ ಸಮಸ್ಯೆಯ ಕಾರಣಕ್ಕೆ ರಾಷ್ಟ್ರ ರಾಜಧಾನಿಯ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಅವರಿಗೆ ಕೊರೋನ ವೈರಸ್ ಪರೀಕ್ಷೆ ನಡೆಸಲಾಗುತ್ತದೆ.
ಇಂದು ಬೆಳಗ್ಗೆ ಟ್ವೀಟ್ ಮಾಡಿದ 55ರ ಹರೆಯದ ಎಎಪಿ ನಾಯಕ ಜೈನ್, ಕಳೆದ ರಾತ್ರಿ ಕಾಣಿಸಿಕೊಂಡ ತೀವ್ರ ಸ್ವರೂಪದ ಜ್ವರ ಹಾಗೂ ನನ್ನ ಆಮ್ಲಜನಕ ಮಟ್ಟ ದಿಢೀರನೆ ಕುಸಿತ ಕಂಡ ಕಾರಣಕ್ಕೆ ನಾನು ಆರ್ಜಿಎಸ್ಎಸ್ಎಚ್ಗೆ ದಾಖಲಾಗಿದ್ದೇನೆ ಎಂದು ಬರೆದಿದ್ದಾರೆ.
ಜೈನ್ ಅವರು ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಉಪಸ್ಥಿತರಿದ್ದ ಸಭೆಯಲ್ಲಿ ಹಾಜರಾಗಿದ್ದರು.
Next Story