ಕಳ್ಳತನದ ಆರೋಪದಲ್ಲಿ ಕುಟುಂಬಕ್ಕೆ ದಿಗ್ಬಂಧನ ವಿಧಿಸಿ, ಬಾಲಕನಿಗೆ ವಿದ್ಯುತ್ ಶಾಕ್ ನೀಡಿದ ದುಷ್ಕರ್ಮಿಗಳು: ಆರೋಪ

ಆಗ್ರಾ: ಚಿನ್ನಾಭರಣ ಕದ್ದಿದ್ದಾರೆಂಬ ಶಂಕೆಯಿಂದ 18 ತಿಂಗಳ ಮಗುವಿನ ಸಹಿತ ಒಂದು ಕುಟುಂಬದ ಆರು ಮಂದಿ ಸದಸ್ಯರನ್ನು ಸುಮಾರು 36 ಗಂಟೆಗಳ ಕಾಲ ಕೊಠಡಿಯಲ್ಲಿ ದಿಗ್ಬಂಧನದಲ್ಲಿ ಇರಿಸಿದ ಘಟನೆ ಆಗ್ರಾದಲ್ಲಿ ನಡೆದಿದೆ.
ಈ ಕುಟುಂಬವನ್ನು ದಿಗ್ಬಂಧನದಲ್ಲಿರಿಸಿದ ವ್ಯಕ್ತಿಗಳು ಕುಟುಂಬದ 12 ವರ್ಷದ ಬಾಲಕ ಸಹಿತ ಇತರ ಸದಸ್ಯರಿಗೆ ಹಲ್ಲೆಗೈದಿದ್ದಾರೆಂದು ಹೇಳಲಾಗಿದೆ. ಈ ಬಾಲಕನೇ ಕಳ್ಳತನ ಪ್ರಕರಣದ ಪ್ರಮುಖ ಆರೋಪಿ ಎಂದು ದುಷ್ಕರ್ಮಿಗಳು ಬಾಲಕನಿಗೆ ಕರೆಂಟ್ ಶಾಕ್ ನೀಡಿದ್ದರೆಂದು ಆರೋಪಿಸಲಾಗಿದೆ.
ಇದರ ಹೊರತಾಗಿ ಸಿಗರೇಟಿನ ತುಂಡಿನಿಂದ ಸುಟ್ಟ ಗಾಯಗಳನ್ನು ಮಾಡಿದ್ದೇ ಅಲ್ಲದೆ ಹೊಟ್ಟೆಗೆ ತುಳಿದು ಮುಖಕ್ಕೆ ಹಲವಾರು ಬಾರಿ ಗುದ್ದಿದ್ದಾರೆಂದೂ ದೂರಲಾಗಿದೆ. ಅಷ್ಟೇ ಅಲ್ಲದೆ ಕುಟುಂಬಕ್ಕೆ ದಿಗ್ಬಂಧನ ವಿಧಿಸಿದ ಸಂದರ್ಭ ಅನ್ನಾಹಾರವಿಲ್ಲದೆ ನರಳುವಂತೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಈ ಕುರಿತಾದ ವೀಡಿಯೋದಲ್ಲಿ ಭಯ ಹಾಗೂ ನೋವಿನಿಂದ ನಡುಗುತ್ತಿರುವ ಬಾಲಕನ ಮುಖ, ಕಣ್ಣಿನ ಭಾಗ ಹಾಗೂ ಬೆನ್ನಿನಲ್ಲಿ ಸುಟ್ಟಗಾಯಗಳಾಗಿರುವುದು ಕಾಣಿಸುತ್ತದೆ.
ರಕ್ಷಣಾ ತಂಡ ಕೊನೆಗೆ ಈ ಕುಟುಂಬವನ್ನು ರಕ್ಷಿಸಿದೆ. ಕುಟುಂಬದ ಸದಸ್ಯರನ್ನು ನಿಝಾಂ (48), ಮುಬೀನಾ (45), ಸೋನು (20) ರುಕ್ಸಾನ ಎಂದು ಗುರುತಿಸಲಾಗಿದೆ.
ಆರೋಪಿಗಳನ್ನು ಅಬ್ರಾರ್, ಮೊಹ್ಸಿನ್, ಜುಬೈರ್, ನದೀಂ, ಶ್ಯಾಮ ಎಂದು ಗುರುತಿಸಲಾಗಿದೆ. ಮೊದಲು ಅಬ್ರಾರ್ ಬಾಲಕನ್ನು ಕಳವಾದ ಚಿನ್ನಾಭರಣಗಳ ಕುರಿತು ಪ್ರಶ್ನಿಸಿ ಆತನ ಮನೆಯಲ್ಲಿ ಥಳಿಸಿದ್ದ. ಬಾಲಕನ್ನು ಹುಡುಕಿಕೊಂಡು ಆತನ ತಂದೆ ಬಂದಾಗ ಇಡೀ ಕುಟುಂಬದವರನ್ನು ತನ್ನ ಮನೆಗೆ ಕರೆಸಿ ಆರೋಪಿ ಮತ್ತಾತನ ಸಹಚರರು ದಿಗ್ಬಂಧನ ವಿಧಿಸಿದ್ದರು.
Horror in #Agra. Look at how these boys were tortured. Punched on the face, tortured by cigarette butts & given electric shocks. Their family was accused of theft by a local RO plant owner & confined since Fri night says @yogitabhayana @agrapolice
— Sourav Sanyal (@SSanyal) June 16, 2020
has arrested 4 accused pic.twitter.com/pvJhoCCBRu