ಕೋವಿಡ್-19: ಭಾರತದ ಚೇತರಿಕೆ ದರ ಶೇ.52.47ಕ್ಕೇರಿಕೆ

ಹೊಸದಿಲ್ಲಿ,ಜೂ.16: ದೇಶದಲ್ಲಿ ಕೊರೋನ ವೈರಸ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳ ಚೇತರಿಕೆಯ ಪ್ರಮಾಣದಲ್ಲಿ ಸುಧಾರಣೆಯಾಗಿದ್ದು,ಅದೀಗ ಶೇ.52.47ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಂಗಳವಾರ ತಿಳಿಸಿದೆ. ಸೋಮವಾರ ಚೇತರಿಕೆ ದರ ಶೇ.51.08ರಷ್ಟಿತ್ತು.
ಕಳೆದ 24 ಗಂಟೆಗಳ ಅವಧಿಯಲ್ಲಿ 10,215 ಕೋವಿಡ್-19 ರೋಗಿಗಳು ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 1,80,012 ರೋಗಿಗಳು ಗುಣಮುಖಗೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಸಚಿವಾಲಯವು,ಪ್ರಸಕ್ತ ದೇಶದಲ್ಲಿ 1,53,178 ಸಕ್ರಿಯ ಪ್ರಕರಣಗಳಿದ್ದು, ವೈದ್ಯಕೀಯ ನಿಗಾದಲ್ಲಿದ್ದಾರೆ ಎಂದು ಹೇಳಿದೆ.
Next Story





