ಆದಿಉಡುಪಿ: ಎಪಿಎಂಸಿ ದಿನವಹಿ ಮಾರುಕಟ್ಟೆ ಉದ್ಘಾಟನೆ

ಉಡುಪಿ, ಜೂ. 16: ಗ್ರಾಮೀಣ ಭಾಗದ ರೈತರು ಬೆಳೆದ ವಿವಿಧ ತರಕಾರಿ ಗಳು ಮಧ್ಯವರ್ತಿಗಳ ಹಾವಳಿಯಿಂದ ನಷ್ಟಕ್ಕೊಳಗಾಗುವಂತಾಗಿದೆ. ಆದರೆ ಆದಿ ಉಡುಪಿಯ ಈ ಎಪಿಎಂಸಿ ದಿನವಹಿ ಮಾರುಕಟ್ಟೆ ರೈತರ ಸಮಸ್ಯೆಗೆ ಪರಿಹಾರ ನೀಡಲಿದೆ ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.
ಮಂಗಳವಾರ ಆದಿಉಡುಪಿ ಎಂಪಿಎಂಸಿ ಮಾರುಕಟ್ಟೆಯಲ್ಲಿ ನಿರ್ಮಾಣ ಗೊಂಡ ನೂತನ ದಿನವಹಿ ಮಾರುಕಟ್ಟೆಯನ್ನು ಉದ್ಘಾಟಿಸಿ ಅವರು ಮಾತನಾಡು ತಿದ್ದರು. ಈವರೆಗೆ ನಗರದಲ್ಲಿದ್ದ ದಿನವಹಿ ಮಾರುಕಟ್ಟೆಯಲ್ಲಿ ಸ್ಥಳಾವಕಾಶದ ಕೊರತೆ ಇತ್ತು. ಇದರಿಂದಾಗಿ ನಿತ್ಯ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿತ್ತು. ಈ ಎಲ್ಲಾ ಸಮಸ್ಯೆಗಳಿಗೆ ಆದಿ ಉಡುಪಿ ಎಪಿಎಂಸಿ ಮಾರುಕಟ್ಟೆ ಪರಿಹಾರ ನೀಡಲಿದೆ ಎಂದವರು ಹೇಳಿದರು.
ಹಿಂದೆ ಈ ಮಾರುಕಟ್ಟೆಯಲ್ಲಿ ವಾರದ ಬುಧವಾರ ಮಾತ್ರ ವ್ಯಾಪಾರಕ್ಕೆ ಅನುಮತಿ ಇತ್ತು. ಈಗ ರೈತರು ನೇರವಾಗಿ ಬಂದು ಮಾರಾಟ ಮಾಡುವು ದರಿಂದ ಉಡುಪಿ ಹಾಗೂ ಮಣಿಪಾಲ ಸೇರಿದಂತೆ ಇತರೆ ಜನರಿಗೆ ಒಂದೆ ಕಡೆಯಲ್ಲಿ ವಿವಿಧ ಬಗೆಯ ತಾಜಾ ತರಕಾರಿಗಳು ಸಿಗಲಿದೆ ಎಂದು ಹೇಳಿದರು.
ಇಂದಿನಿಂದ ಅಂಬಾಗಿಲು, ಬೀಡಿನಗುಡ್ಡೆ ಭಾಗದ ಬೀದಿಗಳಲ್ಲಿ ತರಕಾರಿ ವ್ಯಾಪಾರ ಮಾಡುವವರನ್ನು ಹಾಗೂ ಹೋಲ್‌ಸೆಲ್ ವ್ಯಾಪಾರಿಗಳನ್ನು ಇಲ್ಲಿಗೆ ಸ್ಥಳಾಂತರಿಸಿ ಅವರಿಗೆ ಇಲ್ಲಿ ದಿನನಿತ್ಯದ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡ ಲಾಗುವುದು. ಉಡುಪಿಯ ಜನತೆ ಇದರ ಪ್ರಯೋಜನ ಪಡೆಯುವಂತೆ ರಘುಪತಿ ಭಟ್ ತಿಳಿಸಿದರು.
ನಗರಸಭೆ ಪೌರಾಯುಕ್ತ ಆನಂದ ಸಿ. ಕಲ್ಲೋಳಿಕರ್ ಮಾತನಾಡಿ, ನಗರಸಭೆ ಯಲ್ಲಿ 25ಕ್ಕೂ ಅಧಿಕ ಬೀದಿ ಬದಿ ಮಾರಾಟ ಮಾಡುವವರು ಇದ್ದಾರೆ. ಅವರೆಲ್ಲ ಇನ್ನು ಆದಿಉಡುಪಿಯ ಈ ಎಪಿಎಂಸಿ ಮಾರುಕಟ್ಟೆಯಲ್ಲಿ ತಮ್ಮ ತರಕಾರಿ ಮಾರಾಟ ಮಾಡಲಿದ್ದಾರೆ. ಇನ್ನು ಮುಂದೆ ನಗರಸಭೆ 35 ವಾರ್ಡ್ ವ್ಯಾಪ್ತಿ ಯಲ್ಲಿ ಬೀದಿ ಬದಿ ವ್ಯಾಪಾರವನ್ನು ನಿಷೇಧಿಸಿದೆ ಎಂದರು.
ನಗರಸಭಾ ಸದಸ್ಯರಾದ ಶ್ರೀಶ ಕೊಡವೂರು, ಸವಿತಾ ಹರೀಶ್ ರಾಮ್, ಎಪಿಎಂಸಿ ಅಧ್ಯಕ್ಷ ಕೆ. ಶಾಮ್‌ಪ್ರಸಾದ್ ಭಟ್, ಉಪಾಧ್ಯಕ್ಷೆ ಲತಾ ಎಸ್., ಕಾರ್ಯದರ್ಶಿ ಗಾಯತ್ರಿ ಎಂ. ಉಪಸ್ಥಿತರಿದ್ದರು. ಎಪಿಎಂಸಿಯ ಶಿವಾನಂದ ಕಾರ್ಯಕ್ರಮ ನಿರೂಪಿಸಿದರು.








