ಕಾಸರಗೋಡು: ಇಂದು ಇಬ್ಬರಿಗೆ ಕೊರೋನ ಪಾಸಿಟಿವ್
ಕಾಸರಗೋಡು : ಜಿಲ್ಲೆಯಲ್ಲಿ ಮಂಗಳವಾರ ಇಬ್ಬರಿಗೆ ಕೊರೋನ ಪಾಸಿಟಿವ್ ಪತ್ತೆಯಾಗಿದೆ. 8 ಮಂದಿ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಕುವೈತ್ ನಿಂದ ಆಗಮಿಸಿದ್ದ 34 ವರ್ಷದ ಕಾಞಂಗಾಡ್ ನಗರಸಭೆ ನಿವಾಸಿ, ಕತರ್ ನಿಂದ ಆಗಮಿಸಿದ್ದ 24 ವರ್ಷದ ಪಡನ್ನ ಗ್ರಾಮ ಪಂಚಾಯತ್ ನಿವಾಸಿ ಸೋಂಕು ಖಚಿತಗೊಂಡವರು. ಇವರಿಬ್ಬರೂ ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದಾರೆ. ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ 8 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಕುಂಬಳೆ ಗ್ರಾಮಪಂಚಾಯತ್ ನಿವಾಸಿಗಳಾದ 30, 36,38, 62 ವರ್ಷದ ವ್ಯಕ್ತಿಗಳು, ಮುಳಿಯಾರು ಗ್ರಾಮಪಂಚಾಯತ್ ನಿವಾಸಿ 42 ವರ್ಷದ ವ್ಯಕ್ತಿ, 56 ವರ್ಷದ ಕಾಸರಗೋಡು ನಗರಸಭೆ ವ್ಯಾಪ್ತಿಯ ವ್ಯಕ್ತಿ, ಪುಲ್ಲೂರು-ಪೆರಿಯ ಪಂಚಾಯತ್ ನಿವಾಸಿ 25 ವರ್ಷದ ವ್ಯಕ್ತಿ ಗುಣಮುಖರಾದವರು. ಪುಲ್ಲೂರು-ಪೆರಿಯ ನಿವಾಸಿ ಚೆನೈಯಿಂದ ಆಗಮಿಸಿದ್ದರು. ಉಳಿದವರು ಮಹಾರಾಷ್ಟ್ರ ದಿಂದ ಬಂದವರು.
ಜಿಲ್ಲೆಯಲ್ಲಿ 3528 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3198 ಮಂದಿ, 330 ಮಂದಿ ಸಾಂಸ್ಥಿಕ ನಿಗಾದಲ್ಲಿದ್ದಾರೆ. ನೂತನವಾಗಿ 210 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 383 ಮಂದಿಯ ಫಲಿತಾಂಶ ಲಭಿಸಿಲ್ಲ. 711 ಮಂದಿ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.





