ಬೆಂಗಳೂರು: ಕೊರೋನ ಸೋಂಕಿಗೆ ಒಂದೇ ದಿನ ಐವರು ಬಲಿ, 47 ಮಂದಿಗೆ ಪಾಸಿಟಿವ್
35 ಮಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

ಬೆಂಗಳೂರು, ಜೂ.16: ನಗರದಲ್ಲಿ ಮಂಗಳವಾರ 47 ಜನರಲ್ಲಿ ಕೊರೋನ ಸೋಂಕು ಪತ್ತೆಯಾಗಿದ್ದು, ಐವರು ಮೃತಪಟ್ಟಿದ್ದಾರೆ. 35 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಇದುವರೆಗೆ 772 ಸೋಂಕಿತರು ದೃಡಪಟ್ಟಿದ್ದು, ಇದರಲ್ಲಿ 362 ಜನ ಗುಣ ಹೊಂದಿದ್ದಾರೆ. ಇನ್ನು 372 ಜನ ಸೋಂಕಿತರು ನಗರದ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಬೆಂಗಳೂರಿನಲ್ಲಿ ಈವರೆಗೆ 38 ಜನ ಮೃತಪಟ್ಟಿದ್ದು, ಮಂಗಳವಾರ 32 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕೊರೋನಗೆ ಐವರು ಬಲಿ
ಬೆಂಗಳೂರು ಮೂಲದ ರೋಗಿ ಸಂಖ್ಯೆ 5336ರ 72 ವರ್ಷದ ವ್ಯಕ್ತಿ ರೋಗಿ ಸಂಖ್ಯೆ 4317ರ ಸಂಪರ್ಕ ಹೊಂದಿದ್ದರು. ಜೂ.6ರಂದು ನಿಗದಿತ ಆಸ್ಪತೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಬೆಂಗಳೂರು ಮೂಲದ 60 ವರ್ಷದ ವ್ಯಕ್ತಿ ಜೂ.15 ರಂದು ಮೃತಪಟ್ಟಿದ್ದಾರೆ.
ರೋಗಿ ಸಂಖ್ಯೆ 7,229ರ 65 ವರ್ಷದ ಮಹಿಳೆ ಬೆಂಗಳೂರು ನಿವಾಸಿಯಾಗಿದ್ದು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಜೂ.13 ರಂದು ನಗರದ ನಿಗದಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿತ್ತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ರೋಗಿ ಸಂಖ್ಯೆ 7,253ರ 85 ವರ್ಷದ ಮಹಿಳೆ ನಗರ ನಿವಾಸಿಯಾಗಿದ್ದು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಜೂ.13 ರಂದು ಕೋವಿಡ್ 19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಮಂಗಳವಾರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಬೆಂಗಳೂರಿನ ಮತ್ತೊಬ್ಬ 86 ವರ್ಷದ ವೃದ್ದೆ ವಿಷಮಶೀತ ಜ್ವರ ಕಾಣಿಸಿಕೊಂಡಿದ್ದು, ಜೂ.10 ರಂದು ನಿಗದಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳವಾರ ಮೃತಪಟ್ಟಿದ್ದಾರೆ.






.jpg)
.jpg)

