ಮಂಗಳೂರು : ಬಾಲಕಿ ನಾಪತ್ತೆ

ಮಂಗಳೂರು, ಜೂ.16: ನಗರದ ಕದ್ರಿಯ ವ್ಯಾಪ್ತಿಯ ಬಾಲಕಿ ನಾಪತ್ತೆಯಾದ ಬಗ್ಗೆ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕದ್ರಿಯ ಶ್ಯಾರೆಲ್ (17) ನಾಪತ್ತೆಯಾದ ಬಾಲಕಿ ಎಂದು ತಿಳಿದುಬಂದಿದೆ.
ಜೂ.13ರಂದು ರಾತ್ರಿ 11 ಗಂಟೆಗೆ ತನ್ನ ಮನೆಯಿಂದ ಹೊರಗೆ ಹೋಗಿ ಬರುವುದಾಗಿ ತಿಳಿಸಿ ಹೋದವರು ವಾಪಸಾಗದೇ ಕಾಣೆಯಾಗಿದ್ದಾರೆ.
ಚಹರೆ: ಎತ್ತರ 5.2 ಅಡಿ, ಬಿಳಿ ಬಣ್ಣ, ದುಂಡು ಮುಖ, ಬೆಕ್ಕು ಕಣ್ಣು, ಕೆಂಪು ಕೂದಲು. ಹಳದಿ ಬಣ್ಣದ ಟಿ-ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ, ತುಳು ಮಾತನಾಡುತ್ತಾರೆ.
ಈ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆ (2220520, 2220800- 2220801) ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story





