ನೆರೆ ಪರಿಹಾರಕ್ಕೆ ಆಗ್ರಹ: ಗೋಕಾಕ್ ತಹಶೀಲ್ದಾರ್ ಕಚೇರಿಗೆ ಜಾನುವಾರುಗಳನ್ನು ನುಗ್ಗಿಸಿ ಪ್ರತಿಭಟನೆ
ಬೆಳಗಾವಿ, ಜೂ.16: ನೆರೆ ಹಾವಳಿಯಿಂದಾಗಿ ಮನೆ, ಹೊಲ, ಜಾನುವಾರುಗಳನ್ನು ಕಳೆದುಕೊಂಡು ಒಂದು ವರ್ಷ ಕಳೆಯುತ್ತಾ ಬಂದಿದ್ದರೂ ಇಲ್ಲಿಯವರೆಗೂ ಪರಿಹಾರ ಕೊಟ್ಟಿಲ್ಲವೆಂದು ಆಕ್ರೋಶ ವ್ಯಕ್ತಿಪಡಿಸಿದ ಸಂತ್ರಸ್ತರು, ಗೋಕಾಕ್ ತಹಶೀಲ್ದಾರ್ ಕಚೇರಿಗೆ ದನ, ಕರು, ಎಮ್ಮೆಗಳನ್ನು ನುಗ್ಗಿಸಿ ಪ್ರತಿಭಟನೆ ಮಾಡಿದರು.
ವಿವಿಧ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಗೋಕಾಕ್ ತಾಲೂಕಿನ ನೂರಾರು ಸಂತ್ರಸ್ತರು, ತಮ್ಮ ದನ ಕರುಗಳನ್ನು ತಹಶೀಲ್ದಾರ್ ಕಚೇರಿ ನುಗ್ಗಿಸಿ, ನೆರೆ ಬಂದು ನಮ್ಮ ಬದುಕು ಸಂಪೂರ್ಣ ನಾಶವಾಗಿದೆ. ಇಲ್ಲಿಯವರೆಗೂ ರಾಜ್ಯ ಸರಕಾರದಿಂದ ನಮಗೆ ಕೇವಲ ಬಾಯಿ ಮಾತಿನ ಭರವಸೆ ಮಾತ್ರ ಸಿಗುತ್ತಿದೆಯೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾನಿರತ ಸಂತ್ರಸ್ತರು ತಮ್ಮ ಮಧ್ಯಾಹ್ನದ ಊಟವನ್ನು ತಹಶೀಲ್ದರ್ ಕಚೇರಿಯಲ್ಲಿಯೇ ತಾತ್ಕಾಲಿಕ ಒಲೆ ಸಿದ್ದಪಡಿಸಿಕೊಂಡು ಅಡುಗೆ ತಯಾರಿಸಿದರು. ರಾಜ್ಯ ಸರಕಾರ ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸದಿದ್ದರೆ, ಇಲ್ಲಿಯೇ ಒಲೆಯನ್ನು ಶಾಶ್ವತವಾಗಿಟ್ಟು ಅಡುಗೆ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
Next Story





