ಕಾರಿನೊಳಗೆ ಲಾಕ್ ಆಗಿ ಇಬ್ಬರು ಮಕ್ಕಳು ಉಸಿರುಗಟ್ಟಿ ಮೃತ್ಯು
ಲಕ್ನೊ, ಜೂ.16: ಕಾರಿನೊಳಗೆ ಆಟವಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕಾರಿನ ಬಾಗಿಲು ಲಾಕ್ ಆದ ಕಾರಣ ಉಸಿರುಗಟ್ಟಿ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ.
ಸಂಬಂಧಿಕರಾದ , ನಾಲ್ಕರಿಂದ 7 ವರ್ಷದವರೆಗಿನ ನಾಲ್ವರು ಮಕ್ಕಳು ಕಾರಿನೊಳಗೆ ಆಟವಾಡುತ್ತಿದ್ದರು. ಈ ಸಂದರ್ಭ ಕಾರಿನ ಬಾಗಿಲು ಆಕಸ್ಮಿಕವಾಗಿ ಲಾಕ್ ಆಗಿಬಿಟ್ಟಿದೆ. ಲಾಕ್ ತೆಗೆಯಲು ಗೊತ್ತಿಲ್ಲದ ಮಕ್ಕಳು ಬೊಬ್ಬೆ ಹೊಡೆದರೂ ಯಾರಿಗೂ ತಿಳಿಯಲಿಲ್ಲ.
ಸ್ವಲ್ಪ ಹೊತ್ತಿನ ಬಳಿಕ ಮಕ್ಕಳನ್ನು ಹುಡುಕುತ್ತಾ ಬಂದ ಮನೆಯವರು ಕಾರಿನೊಳಗೆ ಪ್ರಜ್ಞೆ ತಪ್ಪಿ ಬಿದ್ದಿದ್ದ ನಾಲ್ಕು ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರು. ಆದರೆ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಮೊರಾದಾಬಾದ್‌ನ ಪೊಲೀಸ್ ಅಧೀಕ್ಷಕ ಅಮಿತ್ ಕುಮಾರ್ ಹೇಳಿದ್ದಾರೆ.
Next Story