ಲಾ ಲಿಗಾ: ಬೆಟಿಸ್-ಗ್ರಾನಡಾ ಪಂದ್ಯ ಡ್ರಾ

ಮ್ಯಾಡ್ರಿಡ್, ಜೂ. 16:ಬೆಟಿಸ್ ಮತ್ತು ಗ್ರಾನಡಾ ತಂಡಗಳ ನಡುವೆ ಸೋಮವಾರ ನಡೆದ ಲಾ ಲಿಗಾ ಫುಟ್ಬಾಲ್ ಪಂದ್ಯ 2-2 ಗೋಲುಗಳಿಂದ ಡ್ರಾದಲ್ಲಿ ಕೊನೆಗೊಂಡಿದೆ.
29 ಪಂದ್ಯಗಳಲ್ಲಿ 42 ಪಾಯಿಂಟ್ಸ್ ಪಡೆದಿರುವ ಗ್ರಾನಡಾ ಎಂಟನೇ ಸ್ಥಾನದಲ್ಲಿದ್ದರೆ, ಪಾಯಿಂಟ್ ಪಟ್ಟಿಯಲ್ಲಿ ಬೆಟಿಸ್29 ಪಂದ್ಯಗಳಲ್ಲಿ 34 ಪಾಯಿಂಟ್‌ಗಳೊಂದಿಗೆ 13ನೇ ಸ್ಥಾನಕ್ಕೆ ಪಡೆದಿದೆ. ಇದರೊಂದಿಗೆ ಕೂಟದಿಂದ ಹೊರಬೀಳುವ ಆತಂಕವನ್ನು ಎದುರಿಸುತ್ತಿದೆ.
ಕಾರ್ಲೋಸ್ ಫರ್ನಾಂಡೀಸ್ ಗೋಲು ದಾಖಲಿಸುವ ಮೂಲಕ ಗ್ರಾನಡಾ 29ನೇ ನಿಮಿಷದಲ್ಲಿ ಗೋಲು ಖಾತೆ ತೆರೆದಿತ್ತು. ಆದರೆ ಎದುರಾಳಿ ತಂಡ ಬೆಟಿಸ್ ಪರ ಎರಡು ಗೋಲು ದಾಖಲಾಗಿ ಗ್ರಾನಡಾ ಸೋಲಿನ ದವಡೆಗೆ ಸಿಲುಕಿದರೂ 91ನೇ ನಿಮಿಷದಲ್ಲಿ ರಾಬರ್ಟೊ ಸೋಲ್ಡಾಡೊ ಗೋಲು ಗಳಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.
ಕಾರ್ಲೋಸ್ ಫರ್ನಾಂಡೀಸ್ ಗೋಲು ನೆರವಿನಲ್ಲಿ ಆರಂಭದಲ್ಲಿ 1-0 ಮುನ್ನಡೆ ಸಾಧಿಸಿದ ಗ್ರಾನಡಾಕ್ಕೆ ತಿರುಗೇಟು ನೀಡಿದ ಎದುರಾಳಿ ತಂಡದ ಸೆರ್ಗಿಯೊ ಕ್ಯಾನ್ಸಾಲೆಸ್ 85ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶದಲ್ಲಿ ಗೋಲು ಕಬಳಿಸಿ 1-1 ಸಮಬಲ ಸಾಧಿಸಲು ನೆರವಾದರು. ಮುಂದೆ 3 ನಿಮಿಷ ಕಳೆಯುವಷ್ಟರಲ್ಲಿ ರಾಮೊನ್ ಅಝೀಝ್ (88ನೇ ನಿ.) ಗೋಲು ಗಳಿಸಿ 2-1 ಮುನ್ನಡೆ ಸಾಧಿಸಿದರು. ಒತ್ತಡಕ್ಕೆ ಸಿಲುಕಿದ ಗ್ರಾನಡಾ ಪರ ರಾಬರ್ಟೊ ಸೋಲ್ಡಾಡೊ ಅವರು ಬೆಟಿಸ್‌ನ ಗೋಲ್‌ಕೀಪರ್ ಕಣ್ಣು ತಪ್ಪಿಸಿ ಚೆಂಡನ್ನು ಗುರಿ ತಲುಪಿಸಿದರು. ಇದರಿಂದ ಉಭಯ ತಂಡಗಳು ಸಮಬಲ ಸಾಧಿಸಿದವು.
ಮಾಡ್ರಿಡ್ ಆಡಿರುವ 28 ಪಂದ್ಯಗಳ ಪಂದ್ಯಗಳ ಪೈಕಿ 17ನೇ ಗೆಲುವು ದಾಖಲಿಸಿದ್ದು, 59 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. ಬಾರ್ಸಿಲೋನಾಕ್ಕಿಂತ ಅಂಕಪಟ್ಟಿಯಲ್ಲಿ 2 ಅಂಕಗಳಷ್ಟು ಮುಂದಿದೆ. 59 ಪಂದ್ಯಗಳನ್ನು ಆಡಿರುವ ಬಾರ್ಸಿಲೋನಾ 19 ಗೆಲುವಿನೊಂದಿಗೆ 61 ಅಂಕ ಪಡೆದು ಅಗ್ರಸ್ಥಾನದಲ್ಲಿದೆ.







