ಗಡಿಯಲ್ಲಿ ನಡೆದ ಘರ್ಷಣೆಗೆ ಸೇನೆ ಹೊಣೆ ಹೊರತು ಸರಕಾರವಲ್ಲ ಎಂದ ‘ಆಜ್ ತಕ್’ನ ಶ್ವೇತಾ ಸಿಂಗ್!
ಸೇನೆಯನ್ನು ದೂರಿದ ಆ್ಯಂಕರ್ ವಿರುದ್ಧ ಭಾರೀ ಆಕ್ರೋಶ

ಹೊಸದಿಲ್ಲಿ: ಲಡಾಕ್ ನ ಭಾರತ-ಚೀನಾ ಗಡಿಭಾಗದಲ್ಲಿ ನಡೆದ ಸೈನಿಕರ ನಡುವಿನ ಘರ್ಷಣೆಗೆ ಭಾರತೀಯ ಸೇನೆಯನ್ನು ದೂರಬೇಕು ಎಂದು ಆಜ್ ತಕ್ ಆ್ಯಂಕರ್ ಶ್ವೇತಾ ಸಿಂಗ್ ಹೇಳಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಇದಕ್ಕೆ ಸೇನೆ ಹೊಣೆ ಹೊರತು ಕೇಂದ್ರ ಸರಕಾರವನ್ನು ದೂರಬಾರದು ಎಂದವರು ಹೇಳಿರುವ ವಿಡಿಯೋ ವೈರಲ್ ಆಗಿದೆ.
“ಗಡಿಯನ್ನು ಕಾಯುವುದು ಸೇನೆಯ ಕೆಲಸವೇ ಹೊರತು ಸರಕಾರದ್ದಲ್ಲ. ರಾಜಕೀಯ ನಾಯಕರ ಆದೇಶಕ್ಕೆ ಕಾಯದೆ ಗಸ್ತು ತಿರುಗುವ ಸ್ವಾತಂತ್ರ್ಯ ಸೇನೆಗಿದೆ. ಚೀನಾ ಭಾರತದ ನೆಲವನ್ನು ವಶಪಡಿಸಿಕೊಂಡಿದೆ ಎಂದು ವರದಿಗಳು ಹೇಳುವುದಾದರೆ , ಅದು ಭಾರತೀಯ ಸೇನೆಯ ಬಗ್ಗೆ ಪ್ರಶ್ನೆಯನ್ನು ಎತ್ತುತ್ತದೆ” ಎಂದು ಶ್ವೇತಾ ಆರೋಪಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಆಜ್ ತಕ್ ನಿರೂಪಕಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ವೈರಲ್ ಆಗಿರುವ ವಿಡಿಯೋ ಈ ಕೆಳಗಿದೆ.
Well done @SwetaSinghAT. Like the way you blamed Indian Army. pic.twitter.com/LFXLMuuQ2K
— Mohammed Zubair (@zoo_bear) June 16, 2020
Next Story







