ಲಡಾಖ್‌ನಲ್ಲಿ ನಮ್ಮ ಯೋಧರ ಹತ್ಯೆ ನೋವಿನ ವಿಚಾರ: ರಾಜನಾಥ್ ಸಿಂಗ್

ಹೊಸದಿಲ್ಲಿ, ಜೂ.17: ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗೆ ನಡೆದ ಹಿಂಸಾತ್ಮಕ ಮುಖಾಮುಖಿ ವೇಳೆ ಪ್ರಾಣ ತ್ಯಾಗ ಮಾಡಿರುವ 20 ಯೋಧರ ಕುಟುಂಬಕ್ಕೆ ಸಾಂತ್ವಾನ ಹೇಳುವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಹೇಳಿದ್ದಾರೆ.
"ಗಾಲ್ವಾನ್‌ನಲ್ಲಿ ನಮ್ಮ ಯೋಧರುಗಳನ್ನು ಕಳೆದುಕೊಂಡಿರುವುದು ಮನಸ್ಸನ್ನು ಕದಲುವ ಹಾಗೂ ನೋವುಂಟು ಮಾಡುವ ವಿಚಾರ. ನಮ್ಮ ಯೋಧರು ಕರ್ತವ್ಯದ ವೇಳೆ ಅನುಕರಣೀಯ ಧೈರ್ಯ ಹಾಗೂ ಶೌರ್ಯವನ್ನು ಪ್ರದರ್ಶಿಸಿದರು. ಭಾರತೀಯ ಸೇನೆಯ ಅತ್ಯುನ್ನತ ಸಂಪ್ರದಾಯದಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ'' ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.
"ದೇಶವು ಸೈನಿಕರ ಧೈರ್ಯ ಹಾಗೂ ತ್ಯಾಗವನ್ನು ಎಂದಿಗೂ ಮರೆಯಲಾರದು. ಹುತಾತ್ಮರಾದ ಯೋಧರಿಗಾಗಿ ನನ್ನ ಹೃದಯ ಮಿಡಿಯುತ್ತಿದೆ. ಇಂತಹ ಕಠಿಣ ಸಮಯದಲ್ಲಿ ರಾಷ್ಟ್ರವು ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ. ಭಾರತದ ಧೈರ್ಯಶಾಲಿಗಳ ಶೌರ್ಯದ ಬಗ್ಗೆ ನಮಗೆ ಹೆಮ್ಮೆ ಇದೆ''ಎಂದು ರಕ್ಷಣಾ ಸಚಿವರು ಟ್ವೀಟ್ ಮಾಡಿದ್ದಾರೆ.
Next Story





