ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿಮ್ಮುವ ನೀರು !

ಮಣಿಪಾಲ ಜೂ.17: ಮಣಿಪಾಲ ಬಬ್ಬುಸ್ವಾಮಿ ದೈವಸ್ಥಾನದ ಎದುರು ಇತ್ತೀಚೆಗೆ ವಿಸ್ತರಣಾ ಕಾಮಗಾರಿ ಪೂರ್ಣಗೊಂಡ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಯಿಂದ ಕಳೆದ 12 ದಿನಗಳಿಂದ ಕುಡಿಯುವ ನೀರು ಹರಿದು ಬರುತ್ತಿದೆ.
ಹೆದ್ಧಾರಿಯಲ್ಲಿ ನಗರಸಭೆ ಅಳವಡಿಸಿದ ಪ್ರಮುಖ ನೀರಿನ ತಿರುಗಣೆಯ ಚೇಂಬರ್ನಲ್ಲಿ ಬಹಳಷ್ಟು ಪ್ರಮಾಣದಲ್ಲಿ ಶುದ್ದ ಕುಡಿಯುವ ನೀರು ಪೊಲಾ ಗುತ್ತಿದೆ. ಸಂಬಂಧಪಟ್ಟ ಉಡುಪಿ ನಗರಸಭೆಯ ಅಧಿಕಾರಿಗಳು ಈ ನೀರು ಪೋಲಾಗುವುದನ್ನು ತಡೆಗಟ್ಟಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Next Story





