ರಶ್ಯದ ಬಾಂಬರ್ ವಿಮಾನಗಳನ್ನು ಹೊರಗಟ್ಟಲು ಅಮೆರಿಕದಿಂದ ಯುದ್ಧವಿಮಾನಗಳ ನಿಯೋಜನೆ
ಮಾಸ್ಕೋ (ರಶ್ಯ), ಜೂ. 17: ಅಮೆರಿಕದ ಗಡಿಯಲ್ಲಿ ಯೋಜಿತ ಹಾರಾಟ ನಡೆಸುತ್ತಿದ್ದ ರಶ್ಯದ 4 ಪರಮಾಣು ಸಜ್ಜಿತ ಟುಪೊಲೆವ್ ಟಿಯು-95ಎಂಎಸ್ ಬಾಂಬರ್ ವಿಮಾನಗಳನ್ನು ಹೊರಗಟ್ಟಲು ಅಮೆರಿಕವು ಯುದ್ಧವಿಮಾನಗಳನ್ನು ನಿಯೋಜಿಸಿತು ಎಂದು ರಶ್ಯ ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ಆರ್‌ಐಎ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಚುಕೊಸ್ಕ್, ಬೆರಿಂಗ್ ಮತ್ತು ಒಖೋಸ್ಕ್ ಸಮುದ್ರಗಳ ತಟಸ್ಥ ಜಲಪ್ರದೇಶಗಳು ಮತ್ತು ಪೆಸಿಫಿಕ್ ಸಾಗರದ ಉತ್ತರ ಭಾಗದಲ್ಲಿ 11 ಗಂಟೆಗಳ ಯಾನವನ್ನು ರಶ್ಯದ ವಿಮಾನಗಳು ಹಮ್ಮಿಕೊಂಡಿದ್ದವು ಎಂದು ಆರ್‌ಐಎ ಬುಧವಾರ ವರದಿ ಮಾಡಿದೆ.
Next Story





