ಶನಿ ಉಪಗ್ರಹ ಟೈಟಾನ್‌ನಲ್ಲಿ ಜ್ವಾಲಾಮುಖಿಯಂಥ ಲಕ್ಷಣಗಳು ಪತ್ತೆ
ವಾಶಿಂಗ್ಟನ್, ಜೂ. 17: ಶನಿ ಗ್ರಹದ ಉಪಗ್ರಹ ಟೈಟಾನ್‌ನ ಧ್ರುವ ಪ್ರದೇಶಗಳಲ್ಲಿ ಜ್ವಾಲಾಮುಖಿಯನ್ನು ಹೋಲುವ ಲಕ್ಷಣಗಳನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಕ್ಯಾಸಿನಿ ವ್ಯೋಮನೌಕೆ ಪತ್ತೆಹಚ್ಚಿದೆ.
‘‘ಕೆಲವು ಕುಳಿಗಳು ತಾಜಾದಂತೆ ಕಂಡುಬರುತ್ತಿವೆ. ಹಾಗಾಗಿ, ಅಲ್ಲಿ ಜ್ವಾಲಾಮುಖಿ ಇತ್ತೀಚೆಗಷ್ಟೇ ಸಕ್ರಿಯವಾಗಿತ್ತು ಅಥವಾ ಈಗಲೂ ಮುಂದುವರಿಯುತ್ತಿರಬಹುದು ಎಂಬ ನಿರ್ಧಾರಕ್ಕೆ ಬರಬಹುದಾಗಿದೆ ಎಂದು ನಾಸಾ ವಿಜ್ಞಾನಿ ಚಾರ್ಲ್ಸ್ ಎ. ವುಡ್ ಹೇಳುತ್ತಾರೆ.
Next Story





