ಸ್ಪಷ್ಟೀಕರಣ
ಮಂಗಳೂರು : ಜೂ. 18: ವಾರ್ತಾಭಾರತಿಯಲ್ಲಿ ಪ್ರಕಟವಾದ ವರದಿಯೊಂದರಲ್ಲಿ ಬುಧವಾರ (ಜೂ.17) ಕುವೈತ್ ನಿಂದ ಮಂಗಳೂರಿಗೆ ಬಂದ ವಿಮಾನದಲ್ಲಿದ್ದ 168 ಅನಿವಾಸಿ ಕನ್ನಡಿಗ ಪ್ರಯಾಣಿಕರ ವೆಚ್ಚವನ್ನು ಅಕ್ಬರ್ ಟ್ರಾವೆಲ್ಸ್ ಸಂಸ್ಥೆ ಭರಿಸಿದೆ ಎಂದು ಸರಕಾರಿ ಅಧಿಕಾರಿಯೊಬ್ಬರು ನೀಡಿದ ಹೇಳಿಕೆ ಪ್ರಕಟವಾಗಿತ್ತು.
ಆದರೆ ಆ ವಿಮಾನದ ಪ್ರಯಾಣಿಕರು ಟಿಕೆಟ್ ವೆಚ್ಚವನ್ನು ತಾವೇ ಪಾವತಿಸಿ ಬಂದಿದ್ದೇವೆ, ಯಾವುದೇ ಟ್ರಾವೆಲ್ ಸಂಸ್ಥೆ ಅದನ್ನು ಭರಿಸಿಲ್ಲ ಎಂದು ವಾರ್ತಾಭಾರತಿಗೆ ಮಾಹಿತಿ ನೀಡಿದ್ದಾರೆ.
Next Story





