ಸತತ 12ನೇ ದಿನವೂ ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ

ಹೊಸದಿಲ್ಲಿ, ಜೂ.18: ದೇಶದ ನಾಲ್ಕು ಮೆಟ್ರೋ ನಗರಗಳಲ್ಲಿ ಸತತ 12ನೇ ದಿನವಾದ ಗುರುವಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ.
ಗುರುವಾರ ಬೆಳಗ್ಗೆ ಆರು ಗಂಟೆಗೆ ಪರಿಷ್ಕೃತ ದರ ಜಾರಿಗೆ ಬಂದಿದೆ.
ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 53 ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್‌ಗೆ 64 ಪೈಸೆ ಹೆಚ್ಚಳವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ದರವನ್ನು ಲೀಟರ್‌ಗೆ 77.81 ರೂ. ಹಾಗೂ ಡೀಸೆಲ್ ಬೆಲೆಯನ್ನು 76.43 ರೂ.ಗೆ ಪರಿಷ್ಕರಿಸಲಾಗಿದೆ ಎಂದು ಸರಕಾರಿ ಸ್ವಾಮ್ಯದ ಭಾರತೀಯ ತೈಲ ನಿಗಮ ತಿಳಿಸಿದೆ.
ಕೋಲ್ಕತಾ(ಪೆಟ್ರೋಲ್ 79.59 ರೂ.,ಡೀಸೆಲ್ 71.96ರೂ.), ಮುಂಬೈ(ಪೆಟ್ರೋಲ್ 84.66 ರೂ., ಡೀಸೆಲ್ 74.93 ರೂ.) ಹಾಗೂ ಚೆನ್ನೈ ನಗರದಲ್ಲಿ ಪೆಟ್ರೋಲ್ 81.32 ರೂ. ಹಾಗೂ ಡೀಸೆಲ್ 74.23 ರೂ.ಏರಿಕೆಯಾಗಿದೆ.
Next Story





