ಚೈನೀಸ್ ಫುಡ್, ರೆಸ್ಟೋರೆಂಟ್ ಗಳನ್ನು ಬಹಿಷ್ಕರಿಸಿ: ಕೇಂದ್ರ ಸಚಿವ ಅಠಾವಳೆ ಕರೆ

ಹೊಸದಿಲ್ಲಿ: ಭಾರತ ಮತ್ತು ಚೀನಾ ನಡುವೆ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿರುವ ಸಂಘರ್ಷಮಯ ಸ್ಥಿತಿ ಹಾಗೂ ಇತ್ತೀಚಿಗಿನ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿರುವ ಹಿನ್ನೆಲೆಯಲ್ಲಿ , ಚೈನೀಸ್ ಆಹಾರ ಮತ್ತು ಅವುಗಳನ್ನು ಮಾರಾಟ ಮಾಡುವ ರೆಸ್ಟೋರೆಂಟ್ ಗಳನ್ನು ಬಹಿಷ್ಕರಿಸಬೇಕೆಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಆಗ್ರಹಿಸಿದ್ದಾರೆ.
“ಚೀನಾ ವಿಶ್ವಾಸದ್ರೋಹಗೈಯ್ಯುವ ದೇಶ. ಚೀನಾದ ಎಲ್ಲಾ ಉತ್ಪನ್ನಗಳನ್ನು ಭಾರತ ಬಹಿಷ್ಕರಿಸಬೇಕು. ಚೈನೀಸ್ ಆಹಾರ ಹಾಗೂ ಅವುಗಳನ್ನು ಮಾರಾಟ ಮಾಡುವ ಹೋಟೆಲ್ ಗಳನ್ನು ಮುಚ್ಚಬೇಕು'' ಎಂದು ಅಠಾವಳೆ ಟ್ವೀಟ್ ಮಾಡಿದ್ದಾರೆ.
Next Story





