‘ಮನೆಯಲ್ಲೇ ಯೋಗ ದಿನವನ್ನು ಆಚರಿಸಿ’
ಉಡುಪಿ, ಜೂ.18: ಪ್ರತಿ ವರ್ಷದಂತೆ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದ್ದು, ಆದರೆ ಪ್ರಸಕ್ತ ಕೋವಿಡ್-19 ಕಾರಣಕ್ಕಾಗಿ ಸಾರ್ವಜನಿಕ ಸಭೆ ಸಮಾರಂಭಗಳ ಆಯೋಜನೆಯನ್ನು ನಿಷೇಧಿ ಸಿರುವುದರಿಂದ ಈ ವರ್ಷದ ಯೋಗ ದಿನಾಚರಣೆ ಯನ್ನು ‘ಯೋಗ ಫ್ರಮ್ ಹೋಮ್’ ಘೋಷ ವಾಕ್ಯದೊಂದಿಗೆ ಅವರವರ ಮನೆಯಲ್ಲೇ ಆಚರಿಸುವಂತೆ ಭಾರತ ಸರಕಾರದ ಆಯುಷ್ ಮಂತ್ರಾಲಯ ಸೂಚಿಸಿದೆ.
ಆದುದರಿಂದ ಸಾರ್ವಜನಿಕರು ಮನೆಯಲ್ಲೇ ಯೋಗಾಭ್ಯಾಸ ನಡೆಸಿ ಅದರ ಛಾಯಾಚಿತ್ರಗಳನ್ನು ಜಿಲ್ಲಾ ಆಯುಷ್ ಕಛೇರಿಯ ಇ-ಮೇಲ್ ವಿಳಾಸಕ್ಕೆ- daoudupi09@gmail.com- ಅಥವಾ ದೂರವಾಣಿ ನಂ: 8621709538ಕ್ಕೆ ಕಳುಹಿಸುವಂತೆ ಜಿಲ್ಲಾ ಆಯುಷ್ ಅಧಿಕಾರಿ ಡಾ.ಅಲಕಾನಂದ ರಾವ್ ತಿಳಿಸಿದ್ದಾರೆ.
Next Story