ಮಾಸ್ಕ್ ಡೇ : ಮಾಸ್ಕ್ ಧರಿಸದೇ ಸಭೆಯಲ್ಲಿ ಪಾಲ್ಗೊಂಡ ಸಂಸದ ಅನಂತ್ ಕುಮಾರ್ ಹೆಗಡೆ

ಕಾರವಾರ: ಕೊರೋನ ವೈರಸ್ ಭೀತಿಯಿಂದ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸರಕಾರವೇ ನಿಯಮಗಳನ್ನು ಮಾಡಿದ್ದು, ಆದರೆ ನಿಯಮಗಳನ್ನು ಜನಪ್ರತಿನಿಧಿಗಳೇ ಪಾಲನೆ ಮಾಡದಿರುವುದು ಜನರ ಆಕ್ಷೇಪಕ್ಕೆ ಕಾರಣವಾಗಿದೆ. ಅಲ್ಲದೆ ಮಾಸ್ಕ್ ಡೇ ಸಂಸದ ಅನಂತ್ ಕುಮಾರ್ ಹೆಗಡೆ ಮಾಸ್ಕ್ ಧರಿಸದೆ ಸಭೆಯಲ್ಲಿ ಪಾಲ್ಗೊಂಡಿದ್ದು, ಫೋಟೊ ವೈರಲ್ ಆಗಿದೆ.
ಕೊರೋನ ವೈರಸ್ ನಿಂದ ರಕ್ಷಣೆ ಪಡೆಯಲು ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸಬೇಕು ಎಂದು ಸಿಎಂ ಯಡಿಯೂರಪ್ಪ ಅವರು ಜೂನ್ 18ರ ದಿನವನ್ನು ಮಾಸ್ಕ್ ಡೇ ಎಂದು ಘೋಷಣೆ ಮಾಡಿದ್ದರು. ಆದರೆ ಇದನ್ನು ಸಂಸದರಾಗಲಿ, ಇತರ ಜನಪ್ರತಿನಿಧಿಗಳು ಪಾಲನೆ ಮಾಡದೆ ಇರುವುದು ಸರಿಯಲ್ಲ ಎನ್ನುವ ಮಾತುಗಳು ಕೇಳಿ ಬಂದವು.
ಗುರುವಾರ ಕಾರವಾರದ ಜಿಲ್ಲಾ ಪಂಚಾಯತ್ ಸಭಾಭನದಲ್ಲಿ ನಡೆದ ಅಧಿಕಾರಿಗಳ ಸಭೆಯ ಅವಧಿಯಲ್ಲಿ ಹೆಚ್ಚಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾಸ್ಕ್ ಧರಿಸಿರಲಿಲ್ಲ. ಮಾಸ್ಕ್ ಡೇ ಎಂದು ಸರಕಾರದ ಘೋಷಣೆ ಕೇವಲ ಜನ ಸಾಮಾನ್ಯರಿಗೆ ಮಾತ್ರ ಎನ್ನುವ ಮಾತುಗಳು ಕೇಳಿ ಬಂದಿವು.
Next Story





