ಬೀಡಿನಗುಡ್ಡೆ ವಲಸೆ ಕಾರ್ಮಿಕರ ಮಕ್ಕಳ ಜೊತೆ ಮಾಸ್ಕ್ ದಿನ

ಉಡುಪಿ, ಜೂ.18: ಕೊರೋನಾ ನಿಯಂತ್ರಣದ ನಿಟ್ಟಿನಲ್ಲಿ ಹಾಗೂ ಮಕ್ಕಳಲ್ಲಿ ಕೊರೋನಾ ಜಾಗೃತಿ ಮೂಡಿಸುವ ಸಲುವಾಗಿ ಇಂದಿನ ಮಾಸ್ಕ್ ದಿನ ಕಾರ್ಯಕ್ರಮವನ್ನು ಉಡುಪಿಯ ಬೀಡಿನಗುಡ್ಡೆ ವಲಸೆ ಕಾರ್ಮಿಕರ ಮಕ್ಕಳ ಜೊತೆ ಗುರುವಾರ ಆಚರಿಸಲಾಯಿತು.
ಚೈಲ್ಡ್‌ಲೈನ್‌ನ ನಿರ್ದೇಶಕ ರಾಮಚಂದ್ರ ಉಪಾದ್ಯಾಯ,ಮಾಸ್ಕ್ ಧರಿಸುವು ದರಿಂದ ಆಗುವ ಪ್ರಯೋಜನ ಹಾಗೂ ಮಾಸ್ಕ್‌ನ ಅವಶ್ಯಕತೆಯ ಕುರಿತು ಅಲ್ಲದೇ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಮಾಹಿತಿಗಳನ್ನು ನೀಡಿದರು.
ಮಂಜುನಾಥ ಹೆಬ್ಬಾರ್ ಕೋವಿಡ್-19 ಕುರಿತು ಅರಿವು ಮೂಡಿಸುವ ಭಿತ್ತಿಪತ್ರ ಬಿಡುಗಡೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಶಾ ಕಾರ್ಯಕರ್ತೆಯರ ಕೋವಿಡ್-19 ಜನಜಾಗೃತಿ ಕಾರ್ಯ ಚಟುವಟಿಕೆಗಳಿಗೆ ಚಪ್ಪಾಳೆಯ ಮೂಲಕ ಅಭಿನಂದಿಸಲಾಯಿತು. ನಂತರ ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನದಲ್ಲಿ ಮಾಸ್ಕ್ ಡೇ ಆಚರಿಸಿ ಮ್ಕಳಿಗೆ ಮಾಸ್ಕ್‌ನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಜುನಾಥ ಹೆಬ್ಬಾರ್ ಹಾಗೂ ಚೈಲ್ಡ್‌ಲೈನ್ ನಿರ್ದೇಶಕ ರಾಮಚಂದ್ರ ಉಪಾದ್ಯಾಯ ಹಾಗೂ ಬೀಡಿನಗುಡ್ಡೆ ವಾರ್ಡ್‌ನ ಆಶಾ ಕಾರ್ಯಕರ್ತೆ ಚಂದ್ರಾವತಿ, ರೇವತಿ ಅಲ್ಲದೇ ಶ್ರೀಕೃಷ್ಣ ಬಾಲನಿಕೇತನದ ಮೇಲ್ವಿಚಾರಕಿ ಶಕುಂತಳಾ, ಮಾತಾಜಿ ಆಶ್ರಮ ಹಾಗೂ ಚೈಲ್ಡ್‌ಲೆನ್‌ನ ಸಿಬ್ಬಂದಿಗಳು ಉಪಸ್ಥಿತರಿದ್ದರು









