ಪಿಯುಸಿ ಪರೀಕ್ಷೆ : ತಲಪಾಡಿ ಗಡಿಭಾಗದ ಪ್ರಯಾಣಿಕರ ಪರದಾಟ

ಮಂಗಳೂರು, ಜೂ.18:ಕೋವಿಡ್-19 ಹಿನ್ನೆಲೆಯಲ್ಲಿ ಉಂಟಾದ ಲಾಕ್ ಡೌನ್ ಕಾರಣದಿಂದ ಮುಂದೂಡಲಾಗಿದ್ದ ರಾಜ್ಯದ ದ್ವಿತೀಯ ಪದವಿ ಪೂರ್ವ ವಿಭಾಗದ ಆಂಗ್ಲಭಾಷಾ ಪರೀಕ್ಷೆ ಇಂದು ನಿಗದಿಯಾ ಗಿದ್ದ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಮಂಗಳೂರಿನ ವಿವಿಧ ಕಾಲೇಜು ಗಳ ಪರೀಕ್ಷಾ ಕೇಂದ್ರಗಳಿಗೆ ಕಾಸರಗೋಡು, ಸುಳ್ಯದ ಜಾಲ್ಸೂರು,ಸೇರಿದಂತೆ ಗಡಿಭಾಗದ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಇದರಿಂದಾಗಿ ಗಡಿಭಾಗದಲ್ಲಿ ನಿತ್ಯ ಪ್ರಯಾಣಿಸುವ ಪ್ರಯಾಣಿಕರು ವಾಹನ ದಟ್ಟಣೆಯಿಂದ ಪರದಾಡಬೇಕಾಯಿತು.
ತಲಪಾಡಿ ಗಡಿಯಿಂದ 600ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನಗರಕ್ಕೆ ಆಗಮಿಸಿದ್ದರು. ರಾಜ್ಯ ಸರಕಾರದ ಆದೇಶದಂತೆ ಪರೀಕ್ಷೆ ಹಾಜರಾಗಲು ಅನುಕೂಲವಾ ಗುವಂತೆ ವಿದ್ಯಾರ್ಥಿ ಗಳಿಗಾಗಿ 22 ಕೆಎಸ್ಸಾರ್ಟಿ ಸಿ ಬಸ್ಸು ಹಾಗೂ 12 ಕಾಲೇಜು ಬಸ್ಸಿನಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗಿ ತ್ತು. ತಲಪಾಡಿ ಗಡಿಯಿಂದ ಸಂಬಂಧಪಟ್ಟ ಆಯಾಯ ವಿವಿಧ ಕಾಲೇಜಿನ ಪ್ರತಿನಿಧಿಗಳ, ಅಧಿಕಾರಿಗಳ ಸಹಯೋಗ ದೊಂದಿಗೆ ಸಮ್ಮುಖದಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆ ತರಲಾಯಿತು.
ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ 30 ಮಂದಿಗೂ ಖಾಸಗಿ ಬಸ್ಸಿನಲ್ಲಿ 15 ಮಂದಿ ವಿದ್ಯಾರ್ಥಿಗಳ ಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲು ನಿಗದಿ ಯಾಗಿತ್ತು. ಪರೀಕ್ಷೆಗೆ ಬರೆಯುವ ಕಾತರ ದೊಂದಿಗೆ ಬೆಳಗ್ಗೆ ಬೇಗನೆ ತಲಪಾಡಿ ಗಡಿಯಲ್ಲಿ ಜಮಾಯಿಸಿದ ವಿದ್ಯಾರ್ಥಿ ಗಳಿಗೆ ಬಸ್ಸು ಹಿಡಿಯುವ ತವಕದಿಂದ ಇದ್ದರು. ಈ ಸಂದರ್ಭದಲ್ಲಿ ಬಸ್ಸಿನಲ್ಲಿ ಸ್ವಲ್ಪ ಪ್ರಮಾಣ ದಲ್ಲಿ ನೂಕು ನುಗ್ಗಲು ಉಂಟಾಯಿತು.
ಕೊವಿಡ್ -19 ನಿಯಮದ ಪ್ರಕಾರ ನಿಗದಿತ ಮಿತಿಗಿಂತ ಹೆಚ್ಚು ಜನರು ಬಸ್ ಗಳಲ್ಲಿ ಪ್ರಯಾಣಿಸಿರು ವುದು ಕಂಡು ಬಂತು. ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್, ಸಾನಿಟೈಸರ್,ಮಾಸ್ಕ್ ಇನ್ನಿತರ ಯಾವುದೇ ಕೋವಿಡ್ 19 ವಿರುದ್ಧ ರಕ್ಷಣೆ ಇಲ್ಲದೆ ಪ್ರಯಾಣಿಸುತ್ತಿದ್ದಾರೆ ಎಂದು ಸ್ಥಳದಲ್ಲಿದ್ದ ಪೋಷಕರು ತಮ್ಮ ಆತಂಕವನ್ನು ತೋಡಿ ಕೊಂಡಿದ್ದಾರೆ. ಗಡಿಭಾಗದಿಂದ ನಿತ್ಯ ಪ್ರಯಾಣಿಸುವ ಪ್ರಯಾಣಿಕರು ವಾಹನ ದಟ್ಟಣೆಯಿಂದ ಮಂಗಳೂರು ಪ್ರಯಾಣಿ ಸಲು ತೊಂದರೆಯಾಗಿದೆ. ಪಿಯುಸಿ ಪರೀಕ್ಷೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇನ್ನಷ್ಟು ವ್ಯವಸ್ಥೆ ಮಾಡ ಬೇಕಿತ್ತು ಎನ್ನುವುದು ಕಾಸರಗೋಡಿನಿಂದ ನಿತ್ಯ ಮಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.







