ತಲಪಾಡಿಯಿಂದ ನಂತೂರ್ ವರೆಗೆ ನಾರಾಯಣ ಗುರು ಸಾಮರಸ್ಯದ ಸಾಲು ಮರ ನಾಟಿಗೆ ಚಾಲನೆ

ಮಂಗಳೂರು : ಗ್ರೀನ್ ಗ್ಲೊಬಲ್ ಟೈಗರ್ಸ್ ಕ್ಲಬ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನವಯುಗ ಕನ್ ಸ್ಟ್ರಕ್ಷನ್, ಅರಣ್ಯ ಇಲಾಖೆ ಇದರ ಸಹಕಾರದಲ್ಲಿ ಪರಿಸರವಾದಿ ಮಾಧವ ಉಳ್ಳಾಲ್ ಇವರ ನೇತೃತ್ವದಲ್ಲಿ ತಲಪಾಡಿಯಿಂದ ನಂತೂರ್ ವರೆಗೆ ನಾರಾಯಣ ಗುರು ಸಾಮರಸ್ಯದ ಸಾಲು ಮರ ಗಿಡ ನಾಟಿ ಕಾರ್ಯಕ್ರಮಕ್ಕೆ ಉಳ್ಳಾಲ ಉಳಿಯ ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣ, ಉಳ್ಳಾಲ ಸಯ್ಯದ್ ಮದನಿ ದರ್ಗಾದ ಅಧ್ಯಕ್ಷ ಅಬ್ದುಲ್ ರಶೀದ್, ಲಯನ್ಸ್ ಗವರ್ನರ್ ರೊನಲ್ಡ್ ಗೋನ್ಸ್ ಚಾಲನೆ ನೀಡಿದರು.
ಅರಣ್ಯ ಇಲಾಖೆಯ ಆರ್.ಎಫ್.ಒ, ಪಿ.ಶ್ರೀಧರ್, ಡಿಆರ್ ಎಫ್ ಒ ರವಿಕುಮಾರ್, ಮೂಡಾ ಅಧ್ಯಕ್ಷ ರವಿಶಂಕರ ಮಿಜಾರ್, ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಶೇಖರ್ ಉಚ್ಚಿಲ್, ಜಿ.ಪ. ಸದಸ್ಯೆ ಧನಲಕ್ಷ್ಮಿ ಗಟ್ಟಿ, ಮಾ.ನಾ.ಪ ಸದಸ್ಯೆ ವೀಣಾ ಮಂಗಳ, ಕಾಂಗ್ರೆಸ್ ಮುಖಂಡ ಈಶ್ವರ್ ಉಳ್ಳಾಲ್, ವಿಶ್ವಹಿಂದೂ ಪರಿಷತ್ ನ ಗೋಪಾಲ್ ಕುತ್ತಾರ್, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಹೆಚ್.ಎಸ್. ಸಾಯಿರಾಮ್, ಪದ್ಮರಾಜ್ ಆರ್, ಬಿ.ಜಿ. ಸುವರ್ಣ, ಗಟ್ಟಿ ಸಮಾಜದ ಪವಿತ್ರ ಕುಮಾರ್ ಗಟ್ಟಿ, ಮೊಗವೀರ ಸಮಾಜದ ಸದಾನಂದ ಬಂಗೇರ, ಪರಿಸರವಾದಿ ಮುರಳೀ ಮೋಹನ್ ಚೂಂತಾರ್, ನವಯುಗದ ಟೋಲ್ ಮೇನೆಜರ್ ಶಿವಪ್ರಸಾದ್, ಲಯನ್ಸ್ ಕ್ಲಬ್ 317 ರ ಪದಾಧಿಕಾರಿಗಳಾದ ಗೀತ್ ಪ್ರಕಾಶ್, ವಿಜಯ ವಿಷ್ಣು ಮಯ್ಯ, ಹರೀಶ್ ಶೆಟ್ಟಿ, ರೋಟರಿ ಕ್ಲಬ್ ನ ಶ್ರೀಮತಿ ನಂದಿನಿ, ಸಾಮಾಜಿಕ ಸಂಸ್ಥೆಗಳ ಪ್ರಮುಖರಾದ ಅಶೋಕ್ ಬಾಡಿ, ಅನಿಲ್ ದಾಸ್, ಪುರುಷೋತ್ತಮ ಕಲ್ಲಾಪು, ಸತೀಶ್ ಭಟ್ನಗರ, ದೀಕ್ಷಿತ್ ತೊಕ್ಕೊಟ್ಟು, ಅತುಲ್ ಬಗಂಬಿಲ, ಭವಿತ್ ಮಂಜನಾಡಿ ಮುಂತಾದವರು ಉಪಸ್ಥಿತರಿದ್ದರು.
ಮನೋಜ್ ಸಾಲಿಯಾನ್ ಉಳ್ಳಾಲ ಸ್ವಾಗತಿಸಿದರು, ಪರಿಸರವಾದಿ ದಿನೇಶ್ ಹೊಳ್ಳ ಪ್ರಸ್ತಾವನೆ ಗೈದರು, ವಕೀಲೆ ಅರುಣ ವಂದಿಸಿ, ಪ್ರವೀಣ್.ಎಸ್.ಕುಂಪಲ ನಿರೂಪಿಸಿದರು.







.jpeg)


