ಪಿ.ಎ. ಕಾಲೇಜ್ ಆಫ್ ಇಂಜಿನಿಯರಿಂಗ್‍ನಲ್ಲಿ ವನಮಹೋತ್ಸವ

ಮಂಗಳೂರು : ಪಿ.ಎ. ಕಾಲೇಜ್ ಆಫ್ ಇಂಜಿನಿಯರಿಂಗ್‍ನಲ್ಲಿ ವನಮಹೋತ್ಸವ ಕಾರ್ಯಕ್ರಮವು ಇತ್ತಿಚೆಗೆ ನಡೆಯಿತು.
ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕರಾದ ಅಬ್ದುಲ್ಲ ಇಬ್ರಾಹಿಂ, ಪಿ.ಎ. ಕ್ಯಾಂಪಸ್ ಗ್ರೀನ್ ಕ್ಯಾಂಪಸಾಗಿ ಚಿರಪರಿಚಿತವಾಗಿದ್ದು, ಇಂತಹ ಕಾರ್ಯಕ್ರಮಗಳಿಂದ ಗ್ರೀನ್ ಕ್ಯಾಂಪಸ್‍ನ್ನು ಇನ್ನೂ ಬಲಿಷ್ಠಗೊಳಿಸುವುದು ಸಂತಸಕರ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಅಬ್ದುಲ್ಲ್ ಶರೀಫ್ ಪ್ರಾಂಶುಪಾಲರು, ಡಾ. ರಮೀಝ್ ಎಂ. ಕೆ. ಉಪಪ್ರಾಂಶುಪಾಲರು, ಶೈಕ್ಷಣಿಕ ನಿರ್ದೇಶಕರಾದ ಡಾ. ಸರ್ಫಾರಾಝ್ ಹಾಶಿಂ, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುಮಾರು 200ಕ್ಕೂ ಅಧಿಕ ಸಸಿಗಳನ್ನು ನೆಡಲಾಗಿದ್ದು. ಇಂತಹ ಕಾರ್ಯಕ್ರಮ ಅನೇಕ ವರ್ಷದಿಂದ ನಡೆಸಲಾಗುತ್ತಿದೆ ಎಂದು ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಸಿ.ವಿ. ಪೂಜಾರ್ ತಿಳಿಸಿದ್ದಾರೆ.

Next Story





