ಮರೆಯಲಾಗದ ಶೌರ್ಯ: ಹುತಾತ್ಮ ಯೋಧರಿಗೆ ಅಮೆರಿಕ ರಾಯಭಾರಿ ಸಂತಾಪ

Photo: twitter.com/USAmbIndia
ಹೊಸದಿಲ್ಲಿ,ಜೂ.19: ಗಲ್ವಾನ್ ಕಣಿವೆಯಲ್ಲಿ ಜೂನ್ 15ರಂದು ಭಾರತ-ಚೀನಾ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಮೃತಪಟ್ಟ ಯೋಧರ ಕುಟುಂಬಗಳಿಗೆ ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ ಜಸ್ಟರ್ ತನ್ನ ಗಾಢಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ.
ಗಲ್ವಾನ್ನಲ್ಲಿ ಪ್ರಾಣತೆತ್ತ ಯೋಧರ ಕುಟುಂಬಗಳಿಗೆ ಭಾರತದಲ್ಲಿನ ಅಮೆರಿಕ ರಾಯಭಾರಿ ಕಚೇರಿಯು ಹೃದಯತಪ್ತ ಅಶ್ರುತರ್ಪಣವನ್ನು ಸಲ್ಲಿಸುತ್ತದೆ. ಅವರ ಶೌರ್ಯ, ಧೈರ್ಯವನ್ನು ಮರೆಯಲು ಸಾಧ್ಯವಿಲ್ಲ’’ ರಾಯಭಾರಿ ಜಸ್ಟರ್ ಟ್ವೀಟಿಸಿದ್ದಾರೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಸಹ ಯೋಧರ ವೀಮರಣಕ್ಕಾಗಿ, ಭಾರತದ ಜನತೆಗೆ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಚೀನಾದೊಂದಿಗೆ ಇತ್ತೀಚೆಗೆ ನಡೆದ ಘರ್ಷಣೆಯ ಪರಿಣಾಮವಾಗಿ ಪ್ರಾಣಕಳೆದುಕೊಂಡವರಿಗೆ ನಾವು ಗಾಢವಾದ ಸಂತಾಪಗಳನ್ನು ಸಲ್ಲಿಸುತ್ತೇವೆ. ದುಃಖತಪ್ತ ಯೋಧರ ಕುಟುಂಬಗಳು, ಪ್ರೀತಿಪಾತ್ರರು ಹಾಗೂ ಸಮುದಾಯಗಳನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇವೆ’’ ಎಂದು ಮೈಕ್ಪಾಂಪಿಯೊ ಟ್ವೀಟ್ ಮಾಡಿದ್ದಾರೆ.
Next Story