ಅಪಾಯದಲ್ಲಿ ನೋಣಾಲು-ತೆರೆಜಾಲು ಕಿರು ಸೇತುವೆ
ಮುತ್ತೂರು, ಜೂ.19: ಮುತ್ತೂರು ಗ್ರಾಪಂ ವ್ಯಾಪ್ತಿಯ ನೋಣಾಲು-ತೆರೆಜಾಲು ಕದ್ರಾಡಿಯಲ್ಲಿರುವ ಕಿರು ಸೇತುವೆಯಲ್ಲಿ ಬಿರುಕು ಕಾಣಿಸಿ ಕೊಂಡಿದ್ದು, ವಾಹನ ಸಂಚಾರ ಭೀತಿದಾಯಕವಾಗಿದೆ.
ಹಳೆಯ ಈ ಸೇತುವೆಯ ಒಂದು ಬದಿಯು ಕುಸಿದಿದೆ. ಲಘು ವಾಹನಗಳು ಮಾತ್ರ ಸಂಚರಿಸುವ ಸೇತುವೆಯು ಕುಸಿದರೆ ತೆರೆಜಾಲು ಪ್ರದೇಶ ಸಂಪರ್ಕ ಕಡಿದುಕೊಳ್ಳಲಿದೆ. ಇಲ್ಲಿ ಹೊಸ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದು, ಸ್ಥಳಕ್ಕೆ ಮುತ್ತೂರು ಗ್ರಾಪಂ ಪಿಡಿಒ ರಾಜೀವಿ, ಕಾರ್ಯದರ್ಶಿ ವಸಂತಿ ಮತ್ತು ಗ್ರಾಪಂ ಸದಸ್ಯ ಜಗದೀಶ ದುರ್ಗಕೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story





