ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ: ಯೋಗಗಂಗೋತ್ರಿ ಸಂಸ್ಥೆಯಿಂದ ಆನ್‍ಲೈನ್ ಯೋಗ

ಬೆಂಗಳೂರು, ಜೂ. 19: ಯೋಗಗಂಗೋತ್ರಿ ಸಂಸ್ಥೆಯು ಪ್ರತಿವರ್ಷವೂ ಅಂತರ್‍ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದು, ಕೋವಿಡ್-19ರ ನಿರ್ಬಂಧದ ಹಿನ್ನೆಲೆಯಲ್ಲಿ ಆನ್‍ಲೈನ್ ಮೂಲಕ ಯೋಗ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಿ ಮನೆಮನೆಗೆ ಯೋಗ ತಲುಪಿಸಲು ಉದ್ದೇಶಿಸಲಾಗಿದೆ.
ಯೋಗ ಅಭ್ಯಾಸ ಮಾಡುವುದರಿಂದ ಆಗುವ ಪ್ರಯೋಜನಗಳು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ವಿಶೇಷವಾಗಿ ಕೋವಿಡ್-19 ತಡೆಗಟ್ಟಲು ಯಾವ ಯೋಗ ಅಭ್ಯಾಸ ಕ್ರಮಗಳು ಸಹಕಾರಿಯಾಗುತ್ತವೆ ಎಂಬುದನ್ನು ಜನರಿಗೆ ತಲುಪಿಸಲು ಯೋಜಿಸಿದ್ದಾರೆ. ಜನರು ಮನೆಯಲ್ಲಿಯೇ ಕುಟುಂಬದೊಂದಿಗೆ ಯೋಗಾಭ್ಯಾಸ ಮಾಡಬಹುದಾಗಿದೆ.
ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರದ ಆಯುಷ್ ಇಲಾಖೆ ರೂಪಿಸಿರುವ ಯೋಗ ಸಾಮಾನ್ಯ ಶಿಷ್ಟಾಚಾರ ಅಭ್ಯಾಸ ಕ್ರಮವನ್ನು ಹೇಳಿಕೊಡಲಾಗುತ್ತದೆ. ಅತ್ಯಂತ ಸುಲಭ ಹಾಗೂ ಎಲ್ಲರೂ ಮಾಡಬಹುದಾದಂತಹ ಅಭ್ಯಾಸ ಕ್ರಮಗಳನ್ನು ಪ್ರತಿಯೊಬ್ಬರೂ ವೀಕ್ಷಿಸಿ ಅಭ್ಯಾಸ ಮಾಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಆಯೋಜಕ ಯೋಗಗಂಗೋತ್ರಿ ಸಂಸ್ಥೆಯ ಯೋಗಗುರು ಡಾ.ಎನ್.ಆರಾಧ್ಯರವರು ಜನರಲ್ಲಿ ಮನವಿ ಮಾಡಿದ್ದಾರೆ.
ಕಾರ್ಯಕ್ರಮವನ್ನು ಯೋಗಗಂಗೋತ್ರಿಯ ಫೇಸ್‍ಬುಕ್‍ನಲ್ಲಿ ಬೆಳಗ್ಗೆ 6ರಿಂದ 8ಗಂಟೆಯ ವರೆಗೆ ವೀಕ್ಷಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಮೊಬೈಲ್ ಸಂಖ್ಯೆ 88846 46108 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ಕೋರಿದೆ.







