ಕೊಡಗಿನ ಪತ್ರಕರ್ತ ಶ್ರೀಧರ್ ನೆಲ್ಲಿತ್ತಾಯಗೆ ಪ್ರತಿಷ್ಠಿತ ಸಿ.ಜಿ.ಕೆ. ಪ್ರಶಸ್ತಿ

ಮಡಿಕೇರಿ ಜೂ.19 : ರಂಗಭೂಮಿ ಪರಿಷತ್ತು ಕರ್ನಾಟಕ ಮತ್ತು ರಂಗಭೂಮಿ ಪ್ರತಿಷ್ಠಾನ ನೀಡುವ 2020ನೇ ಸಾಲಿನ ಪ್ರತಿಷ್ಠಿತ ಸಿ.ಜಿ.ಕೆ. ಪ್ರಶಸ್ತಿ ಕೊಡಗಿನ ಹಿರಿಯ ಪತ್ರಕರ್ತ ಶ್ರೀಧರ್ ನೆಲ್ಲಿತ್ತಾಯ ಅವರಿಗೆ ಲಭಿಸಿದೆ.
ಖ್ಯಾತ ರಂಗಭೂಮಿ ನಿರ್ದೇಶಕ ದಿ.ಸಿ.ಜಿ.ಕೃಷ್ಣಸ್ವಾಮಿ ಜನ್ಮ ದಿನವಾದ ಜೂನ್ 27 ರಂದು ಕರ್ನಾಟಕದ ಪ್ರತಿ ಜಿಲ್ಲೆಯ ಒಬ್ಬ ರಂಗಕರ್ಮಿಗೆ ಈ ಪ್ರಶಸ್ತಿ ನೀಡಲಾಗುವುದು. ಕೊಡಗು ಜಿಲ್ಲೆಯ ಶ್ರೀಧರ್ ನೆಲ್ಲಿತ್ತಾಯ ಅವರ ಹೆಸರನ್ನು ರಂಗಭೂಮಿಯಲ್ಲಿನ ಸಾಧನೆಯನ್ನು ಪರಿಗಣಿಸಿ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ಸೂಚಿಸಿದರು.
1986 ರಲ್ಲಿ ರಂಗಭೂಮಿ ಪ್ರವೇಶ ಮಾಡಿ ಪೊನ್ನಂಪೇಟೆಯ "ಸೃಷ್ಟಿ" ತಂಡದಲ್ಲಿ ಬಾಲನಟನಾಗಿ ಸೇರಿ ನಂತರ ಶಿಕ್ಷಣ ಮುಗಿದ ಮೇಲೆ ಮಕ್ಕಳ ನಾಟಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ರಂಗಭೂಮಿ ಸಂಘಟನೆಗೆ ಒತ್ತು ನೀಡಿ ಕೊಡಗಿನ ರಂಗಭೂಮಿ ಬೆಳವಣಿಗೆಗೆ ಶ್ರೀಧರ್ ನೆಲ್ಲಿತ್ತಾಯ ಮಹತ್ವದ ಕಾಣಿಕೆ ನೀಡಿದ್ದಾರೆ.
Next Story





