ಮೈಶುಗರ್ ಎಂಡಿ ನೊಟೀಸ್ ಯಡವಟ್ಟು: ಶೇರುದಾರರ ಆಕ್ರೋಶ
ಮಂಡ್ಯ, ಜೂ.19: ಮೈಶುಗರ್ ಆಡಳಿತ ಮಂಡಳಿಯ ಯಡವಟ್ಟು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ವಾರ್ಷಿಕ ಸಭೆಯ ನಡೆಸುವ ನೊಟೀಸ್ ನಲ್ಲಿ ವಾರ ಮತ್ತು ದಿನಾಂಕ ದೋಷ ಕುರಿತು ಟೀಕೆ ಮಾಡಲಾಗುತ್ತಿದೆ.
ಶೇರುದಾರರ ವಾರ್ಷಿಕ ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಏರ್ಪಡಿಸಿ ಕಂಪನಿ ವ್ಯವಸ್ಥಾಪಕ ನಿರ್ದೇಶಕರು ತಿಳಿವಳಿಕೆ ನೊಟೀಸ್ ಹೊರಡಿಸಿದ್ದಾರೆ. ಅದರಲ್ಲಿ ದಿ.22-06- 2020, ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸಭೆ ಎಂದು ತಿಳಿಸಲಾಗಿದೆ. ಆದರೆ, ವಾಸ್ತವವಾಗಿ ಅದು ಸೋಮವಾರವಾಗಿದೆ.
ದಿನಾಂಕ ಮತ್ತು ವಾರದ ಬದಲಾವಣೆ ಯಡವಟ್ಟಿಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೇರುದಾರರಿಗೆ ಗೊಂದಲ ಮೂಡಿಸಿ ಸಭೆಯನ್ನು ಯಾವುದೇ ಪ್ರಶ್ನೆಗಳು ಇಲ್ಲದೇ ಮುಗಿಸುವ ಹುನ್ನಾರವಾಗಿದೆ ಎಂದು ಆರೋಪಿಸಲಾಗಿದೆ.
Next Story





