ಭಾರೀ ಶಬ್ಧದೊಂದಿಗೆ ಭೂಮಿಗೆ ಅಪ್ಪಳಿಸಿದ ಉಲ್ಕಾಶಿಲೆಯಂತಹ ವಸ್ತು: ಗಾಬರಿಗೊಂಡ ಗ್ರಾಮಸ್ಥರು
ಜೈಪುರ್ : ರಾಜಸ್ಥಾನದ ಜಲೋರ್ ಜಿಲ್ಲೆಯ ಸಂಚೋರೆ ಪಟ್ಟಣದಲ್ಲಿ ಶುಕ್ರವಾರ ಬೆಳಗ್ಗೆ ಉಲ್ಕಾಶಿಲೆಯಂತಹ ವಸ್ತುವೊಂದು ಭೂಮಿ ಮೇಲೆ ಬಿದ್ದು 2ರಿಂದ 3 ಅಡಿ ಆಳದ ಹೊಂಡ ಸೃಷ್ಟಿಸಿದೆ.
ಈ ಸ್ಥಳದ ಸುತ್ತಮುತ್ತಲಿನ ನಿವಾಸಿಗಳು ತಮಗೆ ಸ್ಫೋಟದ ಸದ್ದು ಕೇಳಿತೆಂದು ತಿಳಿಸಿದ್ದಾರೆ. ನಂತರ ಹುಡುಕಾಡಿದಾಗ ಪಟ್ಟಣದ ಗಾಯತ್ರಿ ಚೌಕ್ ಸಮೀಪ ದೊಡ್ಡ ಕಲ್ಲಿನಂತಹ ವಸ್ತುವನ್ನು ಕಂಡಿದ್ದಾರೆ.
ಈ ಉಲ್ಕಾಶಿಲೆಯಂತಹ ವಸ್ತು ಶುಕ್ರವಾರ ಕಾಣಿಸಿದ್ದು ಅದು ಸುಮಾರು 2.8 ಕೆಜಿ ತೂಗುತ್ತಿದೆ, ಈ ವಸ್ತು ಬಿದ್ದ ಸ್ಥಳದ ಸುತ್ತಮುತ್ತ ಯಾರನ್ನೂ ಬಿಡಲಾಗುತ್ತಿಲ್ಲ. ಈ ವಸ್ತುವನ್ನು ಹೆಚ್ಚಿನ ಅಧ್ಯಯನಕ್ಕಾಗಿ ದಿಲ್ಲಿಗೆ ಕಳುಹಿಸಲಾಗುವುದು ಎಂದು ಸಂಚೋರೆ ಉಪವಿಭಾಗಾಧಿಕಾರಿ ಭೂಪೇಂದ್ರ ಯಾದವ್ ಹೇಳಿದ್ದಾರೆ.
Live video of the the meteorite from Sanchore pic.twitter.com/9DCsIl6Yj6
— #justiceforSushantSinghRajput (@bhaveshmehta86) June 19, 2020
Next Story