ಉಡುಪಿ: ಆರ್‌ಜಿಪಿಆರ್‌ಎಸ್‌ನಿಂದ ಹುತಾತ್ಮ ವೀರಯೋಧರಿಗೆ ಶ್ರದ್ಧಾಂಜಲಿ
ಉಡುಪಿ, ಜೂ.20: ಇತ್ತಿಚೆಗೆ ಭಾರತ-ಚೀನಾದ ಲಡಾಕ್ ಗಡಿಯಲ್ಲಿ ಚೀನ ಸೈನಿಕರೊಂದಿಗೆ ಸೆಣಸಿ ಹುತಾತ್ಮರಾದ ವೀರ ಯೋಧರಿಗೆ ಉಡುಪಿ ಜಿಲ್ಲಾ ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ವತಿಯಿಂದ ಶುಕ್ರವಾರ ಸಂಜೆ ಶೃದ್ಧಾಂಜಲಿ ಸಲ್ಲಿಸಲಾಯಿತು.
ಹುತಾತ್ಮ ಯೋಧರ ಭಾವಚಿತ್ರದ ಎದುರು ಮೊಂಬತ್ತಿ ಬೆಳಗಿಸಿ ಮೌನ ಪ್ರಾರ್ಥನೆ ಸಲ್ಲಿಸುವ ಮೂಲಕ ಯೋಧರಿಗೆ ಗೌರವ ಸಮರ್ಪಿಸಲಾಯಿತು. ಇದೇ ವೇಳೆ ಹುತಾತ್ಮ ವೀರ ಯೋಧರಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಿಶನ್‌ಹೆಗ್ಡೆ ಕೊಳ್ಕೆಬೈಲು, ಹಿರಿಯ ಕಾಂಗ್ರೆಸ್ ನಾಯಕಿ ವೆರೋನಿಕಾ ಕರ್ನೆಲಿಯೊ ನುಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಯು.ಆರ್. ಸಭಾಪತಿ, ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ರಾಜ್ ಸಂಘಟನೆಯಸಂಯೋಜಕಿ ರೋಶನಿ ಒಲಿವರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ, ನಾಯಕರಾದ ಹರೀಶ್ ಕಿಣಿ, ಡಾ. ಸುನೀತಾ ಶೆಟ್ಟಿ, ಜನಾರ್ಧನ್ ಭಂಡಾರ್ಕರ್, ಶಾಂತಿ ಪಿರೇರಾ, ಮೇರಿ ಡಿಸೋಜಾ, ಭಾಸ್ಕರ್‌ರಾವ್ ಕಿದಿಯೂರು, ನಾಗೇಶ್ ಉದ್ಯಾವರ್, ಕೃಷ್ಣಮೂರ್ತಿ ಆಚಾರ್ಯ, ಗಣೇಶ್‌ರಾಜ್ ಸರಳೇಬೆಟ್ಟು, ನರಸಿಂಹ ಮೂರ್ತಿ, ರೊನಾಲ್ಡ್ ಪ್ರವೀಣ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.







