ಪರ್ಕಳ: ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ
ಸಾಂದರ್ಭಿಕ ಚಿತ್ರ
ಉಡುಪಿ, ಜೂ.20: ರವಿವಾರ ಬೆಳಗಿನಿಂದ ಅಪರಾಹ್ನದವರೆಗೆ ನಡೆಯುವ ಪಾರ್ಶ್ವ ಸೂರ್ಯಗ್ರಹಣವನ್ನು ಸುರಕ್ಷಿತವಾಗಿ ವೀಕ್ಷಿಸಲು ಪರ್ಕಳದ ಬಾಬುರಾಯ ಸರ್ಕಲ್ ಬಳಿ ಇರುವ ಹೋಟೆಲ್ ಸ್ವಾಗತ್ ಬಳಿ ಅವಕಾಶ ಕಲ್ಪಿಸಲಾಗಿದೆ.
ಮಣಿಪಾಲ ಎಂಐಟಿ ಉದ್ಯೋಗಿ ಪ್ರೊ.ಆರ್. ಮನೋಹರ್ ಅವರು ಸುರಕ್ಷತಾ ಟಿಂಟೆಡ್ ಗ್ಲಾಸ್ ಅಳವಡಿಸಿದ ದೂರದರ್ಶಕದಿಂದ ಸೂರ್ಯ ಗ್ರಹಣವನ್ನು ನೋಡುವ ಅವಕಾಶ ಹಾಗೂ ಸರಳೇಬೆಟ್ಟುವಿನ ಸುಹಾಸ್ ಶೆಣೈ ಅವರು ಡಿಜಿಟಲ್ ತಂತ್ರಜ್ಞಾನದ ಕ್ಯಾಮರಾದಿಂದ ಸೆರೆ ಹಿಡಿದು ಲ್ಯಾಪ್ಟಾಪ್ ಮೂಲಕ ನೇರವಾಗಿ ಸೂರ್ಯಗ್ರಹಣವನ್ನು ಕಂಪ್ಯೂಟರ್ ಮಾನಿಟರ್ನಲ್ಲಿ ನಲ್ಲಿ ತೋರಿಸಲಾಗುವುದು.
ಸೂರ್ಯಗ್ರಹಣ ನೋಡುವ ಸುರಕ್ಷಿತವಾದ ಕನ್ನಡಕದ ಮೂಲಕ ಹಾಗೂ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎ.ಪಿ.ಭಟ್ ನೀಡಿರುವ ಪಿನ್ ಹೋಲ್ ಕೆಮರಾ ಕಿಟ್ ಮೂಲಕ ಗೋಡೆಗೆ ಹಾಯಿಸಿ ಸೂರ್ಯಗ್ರಹಣವನ್ನು ಸುರಕ್ಷಿತವಾಗಿ ನೋಡುವ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ.
ಖಗೋಳ ವೀಕ್ಷಣೆಗೆ ಆಸಕ್ತರು ಸ್ಥಳದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಸುರಕ್ಷಿತ ಮಾಸ್ಕ್ ಧರಿಸಿರಬೇಕು. ಸ್ಥಳದಲ್ಲಿ ಕೈ ತೊಳೆಯಲು ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಜೂ.21ರ ರವಿವಾರ ಬೆಳಗ್ಗೆ 10 ಗಂಟೆಯಿಂದ ಅಪರಾಹ್ನ 1:30ಕ್ಕೆ ಗ್ರಹಣ ಮುಗಿಯುವ ತನಕ ವೀಕ್ಷಿಸಬಹುದಾಗಿದೆ. ಅಲ್ಲದೇ ಫೇಸ್ಬುಕ್ ಮೂಲಕ ನೇರವಾಗಿ ಸ್ಥಳದಲ್ಲಿ ನಡೆಯುವ ಪ್ರಕ್ರಿಯೆಯನ್ನು ನೋಡುವ ಅವಕಾಶ ಕಲ್ಪಿಸಲಾಗುವುದು ಎಂದು ಕಾರ್ಯಕ್ರಮ ಸಂಘಟಕ ಗೇಶ್ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.