ಫೋಕಸ್ ರಾಘು ಛಾಯಾಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

ಉಡುಪಿ, ಜೂ.20: ಸೈಬೀರಿಯ ದೇಶದ ಬೆಲ್ಗ್ರೆಡ್‌ನಲ್ಲಿ ನಡೆದ ಅಂತಾ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಹಳ್ಳಿಯ ಕೆಸರುಗದ್ದೆಯ ಮಕ್ಕಳ ಆಟದ ಚಿತ್ರಕ್ಕೆ ಉಡುಪಿಯ ಛಾಯಾಗ್ರಾಹಕ ಪೋಕಸ್ ರಾಘು ಅವರಿಗೆ ಫೋಟೋ ಜರ್ನಲಿಸಂ ವಿಭಾಗದಲ್ಲಿ ಎಫ್‌ಐಎಪಿ ಗೋಲ್ಡ್ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ವಿಶ್ವದ ವಿವಿಧ ದೇಶಗಳಿಂದ ಬಹಳಷ್ಟು ಛಾಯಾಚಿತ್ರಗಳು ಈ ಸ್ಪರ್ಧೆಯಲ್ಲಿದ್ದವು. ಪೋಕಸ್ ರಾಘು ಅವರಿಗೆ ದೊರೆತ 24ನೆ ಅಂತಾರಾಷ್ಟ್ರೀಯ ಪ್ರಶಸ್ತಿ ಇದಾಗಿದೆ. ರಾಘು ಅವರ ಈ ಸಾಧನೆಗಳನ್ನು ಗುರುತಿಸಿ ನಿಕೋನ್ ಸಂಸ್ಥೆ ಕರ್ನಾಟಕ ರಾಜ್ಯಕ್ಕೆ ನಿಕೋನ್ ಇನ್ಫುಯೆನ್ಸರ್ ಆಗಿ ನೇಮಕ ಮಾಡಿದೆ. ಇವರು ಉಡುಪಿಯ ಛಾಯಾಗ್ರಾಹಕ ಗುರುದತ್ ಅವರ ಶಿಷ್ಯ.
Next Story





