ಉಡುಪಿ: ಪೌಷ್ಠಿಕ ಆಹಾರ ಪಡೆಯಲು ಅರ್ಜಿ ಆಹ್ವಾನ
ಉಡುಪಿ, ಜೂ.20: ಉಡುಪಿ ಜಿಲ್ಲೆಯ ಕೊರಗ/ಮಲೆಕುಡಿಯ ಜನಾಂಗದ ವರಿಗೆ ಪೌಷ್ಠಿಕ ಆಹಾರ ನೀಡಲು ಹೊಸ ನಿಯಮಗಳನ್ನು ರೂಪಿಸಿದ್ದು, ಅದರಂತೆ ಜಿಲ್ಲೆಯ ಕೊರಗ ಹಾಗೂ ಮಲೆಕುಡಿಯ ಜನಾಂಗದ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪೌಷ್ಟಿಕ ಆಹಾರ ಅರ್ಜಿಗಳನ್ನು ಈಗಾಗಲೇ ತಲುಪಿಸಿದ್ದು, ಐಟಿಡಿಪಿ ಕಛೇರಿ ಹಾಗೂ ಸಂಬಂಧಪಟ್ಟ ಗ್ರಾಪಂಗಳಲ್ಲಿ ಅರ್ಜಿಗಳನ್ನು ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಜುಲೈ 4ರೊಳಗೆ ಯೋಜನಾ ಸಮನ್ವಯಾಧಿ ಕಾರಿಗಳ ಕಚೇರಿ, ಐಟಿಡಿಪಿ, ರಜತಾದ್ರಿ, ಬಿ ಬ್ಯಾಕ್, 2ನೇ ಮಹಡಿ ಕೊಠಡಿ ಸಂಖ್ಯೆ: 310(ದೂ.ಸಂ. 0820-2574814)ಕ್ಕೆ ತಲುಪಿಸುವಂತೆ ಪ್ರಕಟಣೆ ತಿಳಿಸಿದೆ.
Next Story





